ಮಂಗಳವಾರ, ನವೆಂಬರ್ 24, 2020
22 °C

ಲಿಂಗಸುಗೂರು: ಬೆಲೆ ಏರಿಕೆಯಲ್ಲಿಯೂ ಖರೀದಿ

ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಂದಡೆ ಪಟಾಕಿ ನಿಷೇಧ ಮಾಡಿದ್ದು ಇನ್ನೊಂದಡೆ ಅಲಂಕಾರಿಕ ಮತ್ತು ತಳಿರು ತೋರಣ ಹಾಗೂ ಅಗತ್ಯ ವಸ್ತುಗಳ ಬೆಲೆ ಮೂರು ಪಟ್ಟು ಹೆಚ್ಚಳವಾಗಿದ್ದರಿಂದ ಗ್ರಾಹಕರು ಪರದಾಡುತ್ತಿರುವ ಚಿತ್ರಣ ಕಂಡು ಬಂತು.

ಕೊರೋನಾ ವೈರಸ್‍ ಭೀತಿ ಕಡಿಮೆಯಾಗಿದ್ದು ದೀಪಾವಳಿ ಹಬ್ಬವನ್ನು ಪಟಾಕಿಗಳನ್ನು ಸಿಡಿಸಿ ಸಂಭ್ರಮದಿಂದ ಆಚರಿಸಬೇಕೆನ್ನುವ ವ್ಯಾಪಾಸ್ಥರು, ಕುಟುಂಬಸ್ಥರಿಗೆ ಪಟಾಕಿ ನಿಷೇಧ ನಿರಾಸೆ ಮೂಡಿಸಿದ ಬಗ್ಗೆ ಜನರಲ್ಲಿ ಅಸಮಾಧಾನ ಮಾತುಗಳು ಕೇಳಿಬಂದಿವೆ.

ದೀಪಾವಳಿ ಆಚರಣೆಗೆ ಅಂಗಡಿ, ಮನೆಗಳು ಸುಣ್ಣ ಬಣ್ಣದಿಂದ ಅಲಂಕಾರಗೊಂಡಿವೆ. ಲಕ್ಷ್ಮೀ ಪೂಜೆಗೆ ಅಲಂಕಾರ ಮಾಡಲು ಬಳಸುವ ಬಾಳೆದಿಂಡು, ಟೆಂಗಿನ ಗರಿಕೆ, ಕಬ್ಬು, ಆಕಾಶ ಬುಟ್ಟಿ, ಲೈಟಿಂಗ್‍, ವಿವಿಧ ಬಗೆಯ ಹೂವುಗಳ ಬೆಲೆ ನಿತ್ಯ ಮಾರುಕಟ್ಟೆಗಿಂತ ಮೂರು ಪಟ್ಟು ಹೆಚ್ಚಾಗಿದೆ. ಇದಕ್ಕೆ ಕೋವಿಡ್‍ ದುಷ್ಪರಿಣಾಮ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಬಾಳೆದಿಂಡು ಜೋಡಿಗೆ ₹ 60 ರಿಂದ ₹ 120, ಟೆಂಗಿನ ಗರಿಕೆ ಜೋಡಿಗ ₹ 80 ರಿಂದ ₹ 100.ಕಬ್ಬಿನ ಗಳ ಜೋಡಿ ₹ 60 ರಿಂದ ₹ 70. ಮಾವಿನ ಎಲೆ ಹಿಡಿಯೊಂದಕ್ಕೆ ₹ 30 ರಿಂದ ₹ 40. ಚೆಂಡು ಹೂ, ಪ್ರತಿ ಕೆ.ಜಿಗೆ ₹ 150 ರಿಂದ ₹ 200. ಇತರೆ ಹೂಗಳು ಮಾರಿಗೆ ₹ 200 ರಿಂದ ₹ 250. ಪ್ರಣತಿ ಜೋಡಿಗೆ ₹ 20 ರಿಂದ ₹ 60 ಮಾರಾಟಗೊಂಡವು.

ಮಾರುಕಟ್ಟೆಯಲ್ಲಿ ಎರಡರಿಂದ ಮೂರು ಪಟ್ಟು ಬೆಲೆ ಹೆಚ್ಚಳದಿಂದ ಬೆಚ್ಚಿಬಿದ್ದ ಗ್ರಾಹಕರು ದರ ಕಡಿಮೆ ಮಾಡಲು ಸುತ್ತಾಡುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು. ಪಟಾಕಿ ಅಂಗಡಿಗಳು ಕಾಣಸಿಗಲಿಲ್ಲ. ಅಲಂಕಾರಿಕ ಅಂಗಡಿ ಮಾಲೀಕರು, ಸಣ್ಣ ಪುಟ್ಟ ವ್ಯಾಪಾರಿಗಳು ಕೂಡ ನಿರೀಕ್ಷಿತ ವ್ಯಾಪಾರ ವಹಿವಾಟು ನಡೆಯದ್ದರಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಪಟಾಕಿಗಳ ಸದ್ದು: ರಾಜ್ಯ ಸರ್ಕಾರ ಪಟಾಕಿ ಮಾರಾಟ ಮತ್ತು ಬಳಕೆ ನಿಷೇಧಿಸಿ ಆದೇಶ ಹೊರಡಿಸಿದೆ. ಮಾರುಕಟ್ಟೆಯಲ್ಲಿ ಪಟಾಕಿ ಅಂಗಡಿಗಳು ಕಾಣಸಿಗುತ್ತಿಲ್ಲ. ಆದರೆ, ಎರಡು ದಿನಗಳಿಂದ ಪಟ್ಟಣದ ಬಹುತೇಕ ಕಡೆಗಳಲ್ಲಿ ಪಟಾಕಿಗಳ ಸದ್ದು ಕೇಳಿಬರುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.