ರಾಯಚೂರು: ‘ಗೃಹಬಳಕೆ ಮತ್ತು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು’ ಎಂದು ಒತ್ತಾಯಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಂ ಸಂಘದ ಪಧಾದಿಕಾರಿಗಳು ನಗರದ ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಇತ್ತೀಚೆಗೆ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ₹60 ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ₹114.50 ಏರಿಕೆ ಮಾಡಿರುವುದು ಅತ್ಯಂತ ಕ್ರೂರ ಮತ್ತು ಜನವಿರೋಧಿ ಕ್ರಮವಾಗಿದೆ’ ಎಂದು ಆಕ್ರೋಶ ಹೊರಹಾಕಿದರು.

‘ಬೆಲೆ ಏರಿಕೆಯಿಂದ ಉಜ್ವಲ ಯೋಜನೆಯ ಬಡ ಫಲಾನುಭವಿಗಳು, ಮಧ್ಯಮ ವರ್ಗದ ಕುಟುಂಬಗಳು, ದುಡಿಯುವ ಜನರ ಮೇಲೆ ದೊಡ್ಡ ಆರ್ಥಿಕ ಹೊರೆ ಬಿದ್ದಿದೆ. ವಾಣಿಜ್ಯ ಸಿಲಿಂಡರ್ ದರ ಏರಿಕೆ ಅಂತಿಮವಾಗಿ ಗ್ರಾಹಕರನ್ನೇ ಬಾಧಿಸಲಿದೆ’ ಎಂದು ದೂರಿದರು.

‘ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಆದಾಯ ಕುಗ್ಗುತ್ತಿದೆ. ಇಂತಹ ಸಂದರ್ಭದಲ್ಲಿ ಅಡುಗೆ ಅನಿಲ ದರ ಏರಿಕೆ ಮಧ್ಯಮ ವರ್ಗದ ಜನರು ಮತ್ತು ಕಾರ್ಮಿಕರ ಜೀವನವನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ’ ಎಂದು ಆರೋಪಿಸಿದರು.

‘ಕೇಂದ್ರದ ಬಿಜೆಪಿ ಸರ್ಕಾರ ಅಡುಗೆ ಅನಿಲ ದರಗಳ ಕುರಿತು ಸ್ಪಷ್ಟ ಹಾಗೂ ಜನಪರ ನಿಲುವು ತಾಳದೇ ಇರುವುದರಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಿಂದೆ ನಡೆದ ನೋಟು ಅಮಾನ್ಯೀಕರಣ, ಕೋವಿಡ್ ಸಂಕಷ್ಟದ ಸಂದರ್ಭಗಳು ಹಾಗೂ ಇಂದಿನ ಎಲ್ಪಿಜಿ ದರ ಏರಿಕೆ ಎಲ್ಲವೂ ಜನರನ್ನು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿಗೆ ತಳ್ಳಿವೆ’ ಎಂದು ದೂರಿದರು.

ಎಐಸಿಸಿಟಿಯು ಜಿಲ್ಲಾ ಘಟಕದ ಅಧ್ಯಕ್ಷ ಅಜೀಜ್ ಜಾಗೀರದಾರ್, ಎಐಸಿಸಿಟಿಯು ರಾಜ್ಯ ಘಟಕದ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್, ಮುಖಂಡರಾದ ಭೀಮಣ್ಣ, ಜಗದೀಶ, ನಿಸಾರ್ ಅಹ್ಮದ್, ಎಲ್ಲಪ್ಪ, ಈರಣ್ಣ, ಮೂವಿಸ್ ಪಾಷಾ, ಗುರುಸ್ವಾಮಿ, ಚಾಂದ್ ಪಾಷಾ, ವೀರೇಶ ಹಾಗೂ ಮಾರಣ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.