ಲಿಂಗಸುಗೂರು: ತಾಲ್ಲೂಕಿಗೆ ಮಂಜೂರಾಗಿದ್ದ ಜಿಲ್ಲಾಸ್ಪತ್ರೆಯನ್ನು ಸಿಂಧನೂರು ನಗರಕ್ಕೆ ಸ್ಥಳಾಂತರ ಮಾಡಿರುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ಮುಖಂಡರು ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಉಪವಿಭಾಗ ಆಸ್ಪತ್ರೆಯನ್ನು 200 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರಿಂದ ತಾಲ್ಲೂಕು, ಅಕ್ಕಪಕ್ಕದ ತಾಲ್ಲೂಕುಗಳ ಜನರು ಸಂತಸಗೊಂಡಿದ್ದರು. ಆದರೆ ಮಂಜೂರು ಆಗಿದ್ದ ಜಿಲ್ಲಾಸ್ಪತ್ರೆಯನ್ನು ಏಕಾಏಕಿ ಸಿಂಧನೂರಿಗೆ ಸ್ಥಳಾಂತರ ಮಾಡುವ ಮೂಲಕ ತಾಲ್ಲೂಕಿನ ಜನರ ಆಸೆಗೆ ಸರ್ಕಾರ ತಣ್ಣೀರು ಎರಚಿದೆ ಎಂದು ದೂರಿದರು.

ಸಿಂಧನೂರಿನ ಶಾಸಕರು ಲಿಂಗಸುಗೂರು ತಾಲ್ಲೂಕಿಗೆ ಏನೇ ಮಂಜೂರಾದರೂ ತಕ್ಷಣವೇ ತಮ್ಮ ತಾಲ್ಲೂಕಿಗೆ ಸ್ಥಳಾಂತರ ಮಾಡಿಸಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಬಾದರ್ಲಿ ಒಡೆತನದ ವಿಸಿಬಿ ಕಾಲೇಜನ್ನೂ ಸಿಂಧನೂರಿಗೆ ಸ್ಥಳಾಂತರ ಮಾಡಿಸಿಕೊಳ್ಳಿ. ಸ್ಥಳಾಂತರದ ನಿರ್ಣಯವನ್ನು ಸರ್ಕಾರ ವಾಪಸ್ ಪಡೆದುಕೊಂಡು ಲಿಂಗಸುಗೂರಿನಲ್ಲಿ ಜಿಲ್ಲಾಸ್ಪತ್ರೆ ಸ್ಥಾಪಿಸಬೇಕು ಎಂದು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ನಾಯ್ಕ ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಚಂದ್ರು ನಾಯಕ, ಬಸವರಾಜ ನಾಯಕ, ಚಂದ್ರಕಾಂತ ಭೋವಿ, ಶಿವರಾಜ ಅಲಬನೂರು, ಕಿರಣ ನಾಯ್ಕ, ರುದ್ರಯ್ಯ ಸ್ವಾಮಿ, ರಮೇಶ ಭೋವಿ, ಮಹಾಂತಯ್ಯ ಸ್ವಾಮಿ, ಲಕ್ಷ್ಮಣ ಭೋವಿ, ಸಂತೋಷ ಭಜಂತ್ರಿ, ನವಾಬ್ ಖಾನ್, ಮಹೇಂದ್ರಕುಮಾರ, ಮಂಜುನಾಥ ರಾಠೋಡ, ಕೃಷ್ಣ ಭೋವಿ, ವೆಂಕಟೇಶ ಗುತ್ತೇದಾರ, ಶಿವಲಿಂಗ ಹಾಗೂ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.