ದೇವದುರ್ಗ: ‘30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕಡ್ಡಾಯವಾಗಿ ಮೂರು ತಿಂಗಳಿಗೆ ಒಮ್ಮೆ ಬಿಪಿ, ಶುಗರ್ ಮತ್ತು ರಕ್ತ ಪರೀಕ್ಷೆ ಮಾಡಿಸಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ ಬನದೇಶ್ವರ ಗಬ್ಬೂರು ಸಲಹೆ ನೀಡಿದರು.

ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ರಕ್ತದೊತ್ತಡ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆಧುನಿಕ ಆಹಾರ ಪದ್ಧತಿ ಮತ್ತು ಅತಿಯಾದ ಕೆಲಸದ ಒತ್ತಡ ನಡುವೆ ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ರಕ್ತದೊತ್ತಡಕ್ಕೆ ಸಿಲುಕಿ ಗಂಭೀರ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಪರೀಕ್ಷೆಗೆ ಒಳಪಟ್ಟಾಗ ಕಾಯಿಲೆಗಳ ಗುಣಲಕ್ಷಣ ತಿಳಿದು ಸೂಕ್ತ ಚಿಕಿತ್ಸೆ ನೀಡಬಹುದು. ದೇಶದ ಶೇ45 ರಷ್ಟು ಜನರಿಗೆ ರಕ್ತದೊತ್ತಡ ಇದೆ. ಅತಿ ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾಗುವವರು ಹೃದಯಾಘಾತಕ್ಕೆ ಒಳಗಾಗುತ್ತಾರೆ’ ಎಂದು ತಿಳಿಸಿದರು.

ಡಾ.ಗಂಗಾಧರ ಮಾತನಾಡಿ, ‘ಯುವಕರು ಕೆಲಸದ ಒತ್ತಡ ಕಡಿಮೆ ಮಾಡಲು ಮದ್ಯಪಾನ, ಧೂಮಪಾನ ಸೇವನೆ ಮಾಡುವುದರಿಂದ ಆ ಕ್ಷಣ ನಶಕ್ಕೆ ಮಾರು ಹೋಗುತ್ತಿರುವುದು ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತದೆ. ಹಸಿ ತರಕಾರಿ ಸೇರಿದಂತೆ ಆರೋಗ್ಯಕ್ಕೆ ಪೂರಕವಾದ ಆಹಾರ ಪದ್ಧತಿ ಅಳವಡಿಸಿಕೊಂಡು ಪೌಷ್ಟಿಕ ಆಹಾರಕ್ಕೆ ಒತ್ತು ನೀಡಬೇಕು’ ಎಂದರು.

ಡಾ.ನಿರ್ಮಲದೇವಿ, ಡಾ.ತ್ಯಾಗರಾಜ, ಅಬೆಲ್ ಶಾಂತಶೀಲನ್, ಶಿವಪ್ಪ, ಸೋಮಪ್ಪ, ಚನ್ನಬಸಯ್ಯ ಹಿರೇಮಠ, ಓಂಕಾರ, ಗೀತಮ್ಮ, ನಂದಕುಮಾರ, ಸಂಗಮ್ಮ, ವಿಶ್ವನಾಥ, ಜ್ಯೋತಿ, ರವಿ,ಹರ ಪ್ರಭುರಾಜ, ಇಮಾಮ್, ಮನೋಜ, ಆಶಾ ಕಾರ್ಯಕರ್ತೆ ದೀಪಾ, ದೀಪಿಕಾ, ಶೃತಿ, ಶಾಂತ, ಭೀಮಮ್ಮ, ಶಿವಗಂಗ, ರೇಣುಕಾ, ತಾಯಮ್ಮ, ನಾಗಮ್ಮ, ರಹಿಮ್ಯುನಿಸ, ಮಹ್ಮದಿ, ಸಬೀನಾ, ಸುಮಿತ್ರಾ, ಸುಮಲತ, ರೇಖಾ ಮತ್ತು ಸುಜಾತಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-32-991754322

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.