ದೇವದುರ್ಗ: ಆರೋಗ್ಯ ಇಲಾಖೆಯಿಂದ ತಾಲ್ಲೂಕಿನಲ್ಲಿ ಜೂ.31ರ ವರೆಗೆ ಹಮ್ಮಿಕೊಂಡಿರುವ ತೀವ್ರತರ ಅತಿಸಾರ ಭೇದಿಯ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಕ್ಕೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬನದೇಶ್ವರ ಚಾಲನೆ ನೀಡಿದರು.

ಜಿಲ್ಲಾ ಆರ್ಸಿಎಚ್ಒ ಡಾ.ನಂದಿತಾ ಮಾತನಾಡಿ, ‘5 ವರ್ಷದ ಒಳಗಿನ ಪ್ರತಿ ಮಗುವಿಗೆ ಎರಡು ಒಆರ್ಎಸ್ ಪೊಟ್ಟಣ, 14 ಝಿಂಕ್ ಮಾತ್ರೆಗಳನ್ನು ನೀಡಲಾಗುತ್ತಿದ್ದು ಇವುಗಳಿಂದ ಅತಿಸಾರ ಭೇದಿಯನ್ನು ತಡೆಯಬಹುದು. ವೈಯಕ್ತಿಕ ಶುಚಿತ್ವ, ಪರಿಸರ ನೈರ್ಮಲ್ಯ, ಪೌಷ್ಟಿಕ ಆಹಾರ ಹಾಗೂ ಹಾಲುಣಿಸುವಿಕೆ ಮೂಲಕ ಕೂಡ ಅತಿಸಾರ ಭೇದಿಯನ್ನು ನಿಯಂತ್ರಿಸಬಹುದು’ ಎಂದು ಹೇಳಿದರು.

ತಾಲ್ಲೂಕಿನ ಎಲ್ಲ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಒಆರ್ಎಸ್, ಝಿಂಕ್ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ.

ಶಿಶು ಯೋಜನಾಅಭಿವೃದ್ಧಿ ಅಧಿಕಾರಿ ಮಾದವನಂದ, ಮುಖ್ಯ ವೈದ್ಯಾಧಿಕಾರಿ ಡಾ.ರಾಜಕುಮಾರ ಹುಲಿಮನಿ, ಮಕ್ಕಳ ತಜ್ಞ ಡಾ.ಶಿವಕುಮಾರ ದೇಸಾಯಿ, ಡಾ.ಎಂ.ಡಿ.ಹಸೆನ್, ಡಾ.ಮಹದೇವ, ಡಾ. ಶಂಶುದ್ದಿನ, ಡಾ.ನಾಗರಾಜ, ಡಾ.ಅಖಿಲೇಶ್, ಡಾ.ಸಿದ್ರಾಮೇಶ ಡಾ.ಸುಶೀಲ, ಡಾ.ತ್ಯಾಗರಾಜ, ಲಕ್ಷ್ಮಿ ಮುಂಡಾಸ್, ಶಿವಪ್ಪ, ಗೀತಮ್ಮ, ಸುಲೋಚನಾ, ಚನ್ನಬಸಯ್ಯ ಹಿರೇಮಠ, ಅಂಗನವಾಡಿ ಮೇಲ್ವಿಚಾರಕರು, ಜಯಶ್ರೀ, ಅರುಣಾ, ರವಿ, ಇಮಾಮ್, ರಾಜು, ಭೀಮರೆಡ್ಡಿ, ಭೀಮನಗೌಡ, ಶಾಂತಮ್ಮ, ಆಶಾ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.