ದೇವದುರ್ಗ: ‘ಮನುಕುಲಕ್ಕೆ ಒಳಿತಾಗಲಿ, ದೇಶದಲ್ಲಿ ಸಹೋದರತ್ವ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳು ಗಟ್ಟಿಯಾಗಲಿ ಎಂಬ ಉದ್ದೇಶದಿಂದ ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ಆಚರಿಸುತ್ತಾರೆ’ ಎಂದು ಧರ್ಮ ಗುರು ಮೌಲ್ವಿ ದರ್ಗಾ ಮಸೀದಿ ಹಫೀಜ್ ಮೊಹ್ಮದ್ ಜುನೇದ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ಮುಸ್ಲಿಮರು ಪವಿತ್ರ ಈದ್ ಉಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು, ‘ಭಾರತ ವಿವಿಧ ಧರ್ಮಗಳ ತೊಟ್ಟಿಲು. ವಿವಿಧತೆಯಲ್ಲಿ ವೈವಿಧ್ಯತೆಯನ್ನು ಹೊಂದಿರುವ ನಾಡು. ರಂಜಾನ್ ಹಬ್ಬದ ಉಪವಾಸ ಇರುವ ಮುಸ್ಲಿಂ ಸಹೋದರರಿಗೆ ಹಿಂದೂ ಸಹೋದರರು ಇಪ್ತಾರ್ ಕೂಟ ಏರ್ಪಡಿಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಹಿಂದೂ ಜನರ ಪ್ರಾಥಮಿಕ ಸಂಬಂಧಗಳು ಸೌಹಾರ್ದತೆಯನ್ನು ಗಟ್ಟಿಗೊಳಿಸುವೆ. ಮುಸ್ಲಿಮರು ಮುಂಜಾನೆ ನಮಾಜ್ ನಂತರ ಹೊಸ ಉಡುಪುಗಳನ್ನು ಧರಿಸಿ, ಮಸೀದಿಗಳಿಗೆ ತೆರಳಿ, ಅಲ್ಲಿಂದ ಸಂಘಟಿತರಾಗಿ ಹಳೆ ಬಸ್ ನಿಲ್ದಾಣದ ಹತ್ತಿರದ ಪವಿತ್ರ ಈದ್ಗಾ ಮೈದಾನದಲ್ಲಿ ಸೇರಿ ಮೌಲ್ವಿಗಳ ಆದೇಶದಂತೆ ಸಾಮೂಹಿಕ ಪ್ರಾರ್ಥನ ನಡೆಸಿದರು. ಮೌಲ್ವಿ ಅವರು ಹಬ್ಬದ ಆಚರಣೆ ಮತ್ತು ಉದ್ದೇಶದ ಕುರಿತು ಪ್ರವಚನ ನೀಡಿದರು. ನಂತರ ಪರಸ್ಪರರು ಆಲಿಂಗನದ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳು ಪಾಲ್ಗೊಂಡಿದ್ದರು. ಮಹಿಳೆಯರು ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.

ಕಾಂಗ್ರೆಸ್ ಜೆಡಿಎಸ್ ಮತ್ತು ಬಿಜೆಪಿಯ ರಾಜಕೀಯ ಮುಖಂಡರು ಈದ್ಗಾ ಮೈದಾನದ ಹತ್ತಿರ ಮುಸ್ಲಿಮರಿಗೆ ಜನರಿಗೆ ಶುಭಾಶಯ ಕೋರಿದರು.

ಜಾಕಿರ್ ಹುಸೇನ್ ಖಾಜಿ, ಮುಕ್ತಿ ಮೌಲಾನ ಮೈಹಿಬೂಬ್, ಅಬ್ದುಲ್ ಅಜೀಜ್, ಸೈಯದ್ ಸುಲೇಮಾನ್, ರಾಜಾ ಮಹಮ್ಮದ್ ತಾತ, ಹಫೀಜ್ ಸೈಯದ್ ಇರ್ಫಾನ್, ಸೈಯದ್ ಫಾರೂಕ್, ಅಮೀನ್ ಬಾಷಾ ಗೌರಂಪೇಟ, ಜಾಕಿರ್ ಹುಸೇನ್ ವಕೀಲ, ಬಾಬುಮಿಯ ಗಲಗ, ಜಾಕಿರ್, ಅಬ್ಬಾಸ್ ಹುಸೇನ್ ಕಬಡ್ಡಿ, ಮೈಹಿಬೂಬ್, ಮೊಹಮ್ಮದ್ ಅಬ್ದುಲ್ ಹಫೀಜ್, ಮೊಹಮ್ಮದ್ ಸೋಫಿಯಾನ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-32-1334931115

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.