ದೇವದುರ್ಗ: ‘ಗ್ರಾಮೀಣರ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಗ್ರಾಮ ಆರೋಗ್ಯ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ನರೇಗಾ ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತ ಹೂಗಾರ ತಿಳಿಸಿದರು.

ತಾಲ್ಲೂಕಿನ ಗಬ್ಬೂರು ಗ್ರಾಮದ ತಾಯಮ್ಮನ ಹಳ್ಳದ ಪಕ್ಕ ನಡೆಯುತ್ತಿರುವ ನರೇಗಾ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 100 ದಿನ ಟಿಬಿ ಅಭಿಯಾನ ಮತ್ತು ಮನರೇಗಾ ಕೂಲಿ ಕಾರ್ಮಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಗ್ರಾಮೀಣರ ಹಾಗೂ ನರೇಗಾ ಕೂಲಿಕಾರರ ಆರೋಗ್ಯ ಸುಧಾರಣೆಯ ಜೊತೆಗೆ ಗ್ರಾಮದ ಆರೋಗ್ಯ ಸದೃಢಗೊಳ್ಳಬೇಕು ಎಂಬ ಉದ್ದೇಶದೊಂದಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮೇ 22ರಿಂದ ಜೂನ್ 22 ರವರೆಗೆ ಗ್ರಾಮ ಆರೋಗ್ಯ ಅಭಿಯಾನ ಹಮ್ಮಿಕೊಂಡಿದೆ’ ಎಂದರು.

ಶಿಬಿರದಲ್ಲಿ 11 ಜನರಿಗೆ ಟಿಬಿ ತಪಾಸಣೆ ಮಾಡಿ, ಕಫ ಪರೀಕ್ಷೆಗೆ ಕಳುಹಿಸಲಾಯಿತು. 44 ಜನರಿಗೆ ಎಕ್ಸ್ರೇಗೆ ಶಿಫಾರಸು ಮಾಡಲಾಯಿತು. 6 ಜನರಿಗೆ ಮಧುಮೇಹ ಹಾಗೂ 11 ಕಾರ್ಮಿಕರಿಗೆ ರಕ್ತದೊತ್ತಡ ಇರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.

ಕ್ಷಯ ಮೇಲ್ವಿಚಾರಕ ರವಿ ಶುಕ್ಲಾ, ಐಇಸಿ ಸಂಯೋಜಕ ಅಮರೇಶ, ಸೈಯದ್ ಮುಬಾಶಿರ್, ಮಂಜುನಾಥ ಕರಿಗಾರ, ಡ್ಯಾನಿಯಲ್, ಪಂಪಾಪತಿ, ಸುಗೂರೇಶ, ತಾಲ್ಲೂಕು ಕ್ಷಯರೋಗ ಮೇಲ್ವಿಚಾರಕ ಭೀಮೇಶ, ಆರೋಗ್ಯ ಇಲಾಖೆ ಸಿಬ್ಬಂದಿ ರಾಮಕೃಷ್ಣ, ರವೀಂದ್ರ, ಅಭಿಜಿತ್, ದೇವಮ್ಮ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-32-340941222

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.