ಶುಕ್ರವಾರ, ಮೇ 14, 2021
32 °C

‘ವಚನಗಳಿಂದ ಸಮಾಜ ತಿದ್ದಿದ ಸಂತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರವಾರ: ‘ಸಮಾಜದ ಮಾನ ಮುಚ್ಚುವ ಬಟ್ಟೆ ನೇಯ್ಗೆ ಕೆಲಸದ ಜೊತೆಗೆ ವಚನಗಳನ್ನು ರಚಿಸಿ ಆ ಮೂಲಕ ಸಮಾಜವನ್ನು ತಿದ್ದಿ ನೇಕಾರ ಸಮಾಜವನ್ನು ಏಳ್ಗೆಯತ್ತಾ ಕೊಂಡೊಯ್ದ ಮಹಾನ್ ಸಂತ ಜೇಡರ (ದೇವರ) ದಾಸಿಮಯ್ಯ ಅವರು‘ ಎಂದು ನೇಕಾರ ಒಕ್ಕೂಟದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಈರಣ್ಣ ಗಾಳಿ ಅತ್ತನೂರು ಹೇಳಿದರು.

ಪಟ್ಟಣದ ತೇಜಸ್ ಮಾಲ್‌ನಲ್ಲಿ ನೇಕಾರ ಒಕ್ಕೂಟದ ತಾಲ್ಲೂಕು ಘಟಕದಿಂದ ದಾಸಿಮಯ್ಯ ಜಯಂತಿ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖಂಡ ಉಮಾಪತಿ ಚುಕ್ಕಿ, ಡಾ.ಸುನೀಲ್ ಸರೋದೆ ಜೇಡರ (ದೇವರ) ದಾಸಿಮಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು.

ನೇಕಾರ ಸಮಾಜದ ಮುಖಂಡರಾದ ಷಣ್ಮುಖಪ್ಪ ಮಸ್ಕಿ, ಡಾ.ನಾರಾಯಣ ಕೊಂಗಾರಿ, ಡಾ.ಅಶ್ವಥನಾರಾಯಣ, ಶಿವಕುಮಾರ ಗುಡ್ಡದಮನಿ, ಉಮೇಶ ಜೇಗರಕಲ್, ರಾಚಪ್ಪ ಬೋನಗಿರಿ, ರವಿಕುಮಾರ ಕೋಟಾ, ಶಂಕರ ಜೇಗರಕಲ್, ರಾಜೇಶ ಗುಡ್ಡದಮನಿ, ಸಚಿನ್ ಚ್ಯಾಗಿ, ವೀರೇಶ ನೇಕಾರ, ಕೃಷ್ಣ ಪರಂಗಿ, ಗಿರೀಶ ಬಂಡರಗಲ್, ಚನ್ನಬಸವ ಗುಡ್ಡದಮನಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.