ದೇವದುರ್ಗ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಜ್ಯೋತಿ ಸಂಜೀವಿನಿ, ಕೆಜಿಐಡಿ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಪುರಸಭೆ ಕಚೇರಿ ಎದುರು ಪೌರ ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಿ ಶಾಸಕಿ ಕರೆಮ್ಮ ಜಿ ನಾಯಕ ಹಾಗೂ ಪುರಸಭೆ ಮುಖ್ಯಾಧಿಕಾರಿ ಪಂಪಯ್ಯ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಿದರು.

ಕಸ ಸಂಗ್ರಹಣೆ, ತ್ಯಾಜ್ಯ ವಿಲೇವಾರಿ, ಶುಚಿತ್ವ ಕೆಲಸದಿಂದ ದೂರ ಉಳಿದು ಮುಷ್ಕರ ನಡೆಸಿದರು.

‘ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ನೇರ ವೇತನ ಜಾರಿ ವ್ಯವಸ್ಥೆಯಡಿ ತಂದು ಕಾಯಂಗೊಳಿಸಬೇಕು. 2022-23ನೇ ಸಾಲಿನಲ್ಲಿ ನೇಮಕವಾದ ಪೌರ ಕಾರ್ಮಿಕರಿಗೆ ಸರ್ಕಾರ ನಗರ ಸ್ಥಳೀಯ ಸಂಸ್ಥೆ ಸ್ಥಳೀಯ ನಿಧಿಯಿಂದ ವೇತನ ಪಡೆಯಲು ನೀಡಿದ ಆದೇಶ ರದ್ದುಪಡಿಸಬೇಕು. ಎಸ್.ಎಫ್.ಸಿ ಅನುದಾನದಡಿ ವೇತನ ನೀಡಬೇಕು. ಸರ್ಕಾರ ನಿಗದಿತ ಅವಧಿಯಲ್ಲಿ ಪೌರ ನೌಕರರ ಬೇಡಿಕೆಗಳು ಈಡೇರಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮಹ್ಮದ್ ಸರ್ದಾರ್, ಗಂಗಾಧರ, ಪ್ರಕಾಶ, ಲಕ್ಷ್ಮಣ, ಶಶಿ, ತಮ್ಮಣ್ಣ, ನಾಗಾರ್ಜುನ ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.