ದೇವದುರ್ಗ : ಬಂಡೆಗಲ್ಲಿನ ಶಾಸನ ಪತ್ತೆ

7

ದೇವದುರ್ಗ : ಬಂಡೆಗಲ್ಲಿನ ಶಾಸನ ಪತ್ತೆ

Published:
Updated:
Deccan Herald

ದೇವದುರ್ಗ:  ತಾಲ್ಲೂಕಿನ ಯರಗುಡ್ಡ ಗ್ರಾಮದ ರೈತರ ಜಮೀನಿನಲ್ಲಿ ಕ್ರಿ.ಶ 17-18ನೇ ಶತಮಾನಕ್ಕೆ ಸೇರಿದ ಶಾಸನ ಪತ್ತೆಯಾಗಿದೆ ಎಂದು ಇತಿಹಾಸ ಉಪನ್ಯಾಸ ಹಾಗೂ ಸಂಶೋದಕ ಡಾ. ಚನ್ನಬಸ್ಸಪ್ಪ ಮಲ್ಕಂದಿನ್ನಿ ತಿಳಿಸಿದ್ದಾರೆ.

ಯರಗುಡ್ಡ ಗ್ರಾಮದ ಮಲ್ಲಪ್ಪ ಮಾಲಿ ಪಾಟೀಲ ಅವರ ಜಮೀನು ಸರ್ವೆ ಸಂಖ್ಯೆ 55 ರಲ್ಲಿ ಕಣಶಿಲೆಯ ಬಂಡೆಗಲ್ಲಿನಲ್ಲಿ ಕನ್ನಡ ಲಿಪಿಯಲ್ಲಿ ರಚಿತವಾಗಿರುವ ಶಾಸನ ಪತ್ತೆಯಾಗಿದ್ದು, ಇದು ಕ್ರಿಶ 17-18ನೇ ಶತಮಾನಕ್ಕೆ ಸೇರಿದೆ. ಶಾಸನವು ಒಕ್ಕಣಿಯಲ್ಲಿ 18 ಸಾಲುಗಳು ಇವೆ ಮತ್ತು ಶಾಸನವು ದಾನಕ್ಕೆ ಸಂಬಂಧಿಸಿದಾಗಿದೆ. ಪ್ರಸ್ತುತ ಜಮೀನಿನ ಮಾಲೀಕನ ತಂದೆ ತಪ್ಪು ಕಲ್ಪನೆಯಿಂದ ಶಾಸನವು ಬೆಂಕಿಗೆ ಆಹುತಿಯಾಯಿತು ಎಂದು ಸ್ಥಳೀಯರು ತಿಳಿಸಿದರು ಎಂದು ಹೇಳಿದ್ದಾರೆ.

ಶಾಸನದ ಹಲವು ಅಕ್ಷರಗಳು ಕಾಣದಂತಾಗಿದ್ದು, ಕೆಲವು ಅಕ್ಷರಗಳಲ್ಲಿ ಛತ್ರ, ಗೌಡ, ಪ್ರಭು, ಮತ್ತರು, ಮಾನ್ಯ, ಸೀಮೆ, ಯರಗುಡ್ಡ ಎಂಬ ವಿಷಯಗಳು ಸ್ಪಷ್ಟವಾಗಿ ಕಾಣಬರುತ್ತವೆ ಎಂದು ಡಾ. ಚನ್ನಬಸ್ಸಪ್ಪ ತಿಳಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !