ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಲ್ಪ್ 100’ ಸಂಸ್ಥೆಯಿಂದ ಕಲಿಕಾ ಸಾಮಗ್ರಿ ವಿತರಣೆ

Last Updated 2 ಜುಲೈ 2022, 12:26 IST
ಅಕ್ಷರ ಗಾತ್ರ

ಕವಿತಾಳ: ‘ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕು’ ಎಂದು ಇನ್ಫೊಸಿಸ್‍ ಸಂಸ್ಥೆಯ ಉದ್ಯೋಗಿ ಹಾಗೂ ಹೆಲ್ಪ್‌ 100 ಸಂಸ್ಥೆಯ ಮುಖ್ಯಸ್ಥ ಸುಜಯ್ ಲಿಂಗಪ್ಪ ಹೇಳಿದರು.

ಪಟ್ಟಣದ ಅಲೆಮಾರಿ ಜನಾಂಗದ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಶನಿವಾರ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ‘ಮಕ್ಕಳ ಶಿಕ್ಷಣಕ್ಕೆ ಪಾಲಕರು ಹೆಚ್ಚಿನ ಆದ್ಯತೆ ನೀಡಬೇಕು. ಬಡ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವುದು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಸಂಸ್ಥೆ ವತಿಯಿಂದ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಅರ್ಹರನ್ನು ಗುರುತಿಸಿ ಅವರಿಗೆ ಸೌಲಭ್ಯ ದೊರಕಿಸಿ ಕೊಡುವುದು ಸಂಸ್ಥೆಯ ಪ್ರಮುಖ ಉದ್ದೇಶ’ ಎಂದರು.

ಶಿಕ್ಷಕ ರವಿಚಂದ್ರ ಮಾತನಾಡಿ, ’ಹೆಲ್ಪ್‌ 100 ಸಂಸ್ಥೆ ವತಿಯಿಂದ ಮಸ್ಕಿ ತಾಲ್ಲೂಕಿನ ಮಲ್ಕಾಪುರ ಮತ್ತು ಇಲ್ಲಿನ ಅಲೆಮಾರಿ ಕುಟುಂಬದ ಅಂದಾಜು ನೂರು ಮಕ್ಕಳಿಗೆ ನೋಟ್‍ ಬುಕ್‍, ಪೆನ್ಸಿಲ್‍, ರಬ್ಬರ್ ಸೇರಿದಂತೆ ಕಲಿಕಾ ಸಾಮಗ್ರಿಗಳ ಕಿಟ್‍ ವಿತರಿಸಲಾಗಿದೆ. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಕುರಿತು ಪಾಲಕರು ಕಾಳಜಿ ವಹಿಸಬೇಕು’ ಎಂದರು.

ಸಂಸ್ಥೆಯ ಸದಸ್ಯರಾದ ಚೇತನಾ ಸುಜಯ್, ಅನಿಲ್, ಕುಮಾರ್ ನೀಲ್‍, ನಾಗಪ್ಪ ಯಡವಲ್, ಮಹೇಶ ಹಾಗೂ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT