ಬಚ್ಚಲಮನೆಯಲ್ಲಿ ಕುಸಿದು ಬಿದ್ದ ನಟ ದೊಡ್ಡಣ್ಣ: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

ಶಕ್ತಿನಗರ (ರಾಯಚೂರು): ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್ಟಿಪಿಎಸ್) ಶಕ್ತಿ ಅತಿಥಿ ಗೃಹದಲ್ಲಿ ಮಂಗಳವಾರ ಹಿರಿಯ ನಟ ದೊಡ್ಡಣ್ಣ ಅವರು ಕಾಲು ಜಾರಿ ಬಿದ್ದ ಘಟನೆ ನಡೆದಿದೆ. ಕೊಠಡಿ ಸಂಖ್ಯೆ 5 ರಲ್ಲಿ ಉಳಿದುಕೊಂಡಿದ್ದ ದೊಡ್ಡಣ್ಣ ಬೆಳಿಗ್ಗೆ ಶೌಚಕ್ಕೆ ಹೋದಾಗ ಕುಸಿದಿದ್ದರು.
ಎರಡು ನಿಮಿಷಗಳ ಕಾಲ ಮಾತನಾಡದ ಕಾರಣ, ಜತೆಯಲ್ಲಿದ್ದ ಪತ್ನಿ ಅಳಲು ಆರಂಭಿಸಿದರು. ನಂತರ ಗೆಸ್ಟ್ ಹೌಸ್ ಸಿಬ್ಬಂದಿ ಸಹಕಾರದಿಂದ ಕೊಠಡಿಯಲ್ಲಿ ಬಿದ್ದಿದ್ದ ದೊಡ್ಡಣ್ಣ ಅವರನ್ನು ಹಾಸಿಗೆ ಮೇಲೆ ಮಲಗಿಸಿದರು. ಆರ್ಟಿಪಿಎಸ್ ವೈದ್ಯ ಡಾ.ರಮೇಶ ಅವರು ಆಸ್ಪತ್ರೆ ಪ್ರಥಮ ಚಿಕಿತ್ಸೆ ನೀಡಿದ ನಂತರ ದೊಡ್ಡಣ್ಣ ಅವರಿಗೆ ಪ್ರಜ್ಞೆ ಮರಳಿತು.
ತಂಪು ಪಾನೀಯ ಕುಡಿಸಿದ ನಂತರ ತುರ್ತು ಚಿಕಿತ್ಸೆಗಾಗಿ ಆರ್ಟಿಪಿಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಶ್ರಾವಣ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ಪತ್ನಿಯೊಂದಿಗೆ ದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ದೇವರ ದರ್ಶನ ಪಡೆದು, ಅತಿಥಿಗೃಹದಲ್ಲಿ ತಂಗಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.