ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ವಿಹಾಳ: ಬೆಳೆ ಹಾನಿ ಪರಿಶೀಲನೆ

Last Updated 27 ನವೆಂಬರ್ 2021, 11:40 IST
ಅಕ್ಷರ ಗಾತ್ರ

ತುರ್ವಿಹಾಳ: ಈಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಹಾನಿಯಾದ ಭತ್ತದ ಬೆಳೆಯನ್ನು ಶಾಸಕ ಆರ್. ಬಸನಗೌಡ ತುರ್ವಿಹಾಳ ಹಾಗೂ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ಪ್ರತ್ಯೇಕವಾಗಿ ತುರ್ವಿಹಾಳ ಮತ್ತು ಶ್ರೀನಿವಾಸ್ ಕ್ಯಾಂಪ್ ಮತ್ತು ಮಧ್ಯಕ್ಯಾಂಪ್‌ಗಳಲ್ಲಿ ಶುಕ್ರವಾರ ವೀಕ್ಷಣೆ ನಡೆಸಿದರು.

ನಂತರ ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ, ಕಟಾವು ಹಂತಕ್ಕೆ ಬಂದು ರೈತರ ಕೈ ಸೇರುವ ಮುನ್ನವೇ, ಅಕಾಲಿಕವಾಗಿ ಸುರಿದ ಮಳೆಗೆ ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾನಿಯಿಂದ ಕಂಗಾಲಾದ ರೈತರ ನೆರವಿಗೆ ಸರ್ಕಾರ ತಕ್ಷಣವೇ ಧಾವಿಸಬೇಕು. ಪ್ರತಿ ಎಕರೆಗೆ ₹ 30 ಸಾವಿರ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಕಂದಾಯ ಇಲಾಖೆ ಅಧಿಕಾರಿ ಪ್ರಭು ಪಾಟೀಲ್, ಕೃಷಿ ಅಧಿಕಾರಿಗಳು ನಾಗರಾಜ, ಉಪತಹಶೀಲ್ದಾರ್ ಕರೆಗೌಡ, ಕಂದಾಯ ನಿರೀಕ್ಷಕ ಆನಂದ, ರೈತರಾದ ಶಿವಲಿಂಗಪ್ಪ ಜಾನೇಕಲ್, ಅಮರೇಶ್ ಎಲೆಕೂಡ್ಗಿ, ಮಾಂತೇಶ ಸಜ್ಜನ, ನಿಂಗಪ್ಪ ರಾಘಲಪರ್ವಿ, ನಾಗರಾಜ ತೆಕ್ಕಲಕೋಟೆ, ವಿಜಯ, ನಾಗಪ್ಪ ಇತರರು ಇದ್ದರು.

ಭತ್ತದ ಬೆಳೆ ಸಮೀಕ್ಷೆ: ತುರ್ವಿಹಾಳ ಸೇರಿದಂತೆ ಮಧ್ಯಕ್ಯಾಂಪ್, ಶ್ರೀನಿವಾಸ ಕ್ಯಾಂಪ್, ಹಾಗೂ ಗುಂಜಳ್ಳಿ, ಏಳುಮೈಲು ಕ್ಯಾಂಪ್ ನಲ್ಲಿ ಶುಕ್ರವಾರ ಭತ್ತದ ಬೆಳೆ ಹಾನಿಯನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ವೀಕ್ಷಿಸಿದರು.

ನಂತರ ಮಾತನಾಡಿದ ಅವರು, ಹಾನಿಯಾಗಿರುವ ಭತ್ತದ ಬೆಳೆ ಸಮೀಕ್ಷೆ ನಡೆದಿದ್ದು ಅಧಿಕಾರಿಗಳಿಂದ ವರದಿ ಸಲ್ಲಿಕೆಯಾದ ತಕ್ಷಣ ಸರ್ಕಾರದ ವತಿಯಿಂದ ಪರಿಹಾರ ನೀಡುಲಾಗುತ್ತದೆ ಎಂದರು. ‌

ಮಾಜಿ ಜಿ.ಪಂ ಸದಸ್ಯ ಅಮರೇಗೌಡ ವಿರುಪಾಪುರ, ಕರಿಯಪ್ಪ ಭಂಗಿ, ನಿಂಗಪ್ಪ ಕಟ್ಟಿಮನಿ, ಬಾಲಪ್ಪ ಕುಂಟೋಜಿ, ಸುಕಮುನಿ,ನಿರುಪಾದಿ ಸ್ರೀನಿವಾಸಕ್ಯಾಂಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT