ವ್ಯವಸ್ಥೆ ಸುಧಾರಣೆಗೆ ಎಲ್ಲರೂ ಮುಂದಾಗಬೇಕಿದೆ: ಉಪೇಂದ್ರ

ಶುಕ್ರವಾರ, ಏಪ್ರಿಲ್ 19, 2019
31 °C

ವ್ಯವಸ್ಥೆ ಸುಧಾರಣೆಗೆ ಎಲ್ಲರೂ ಮುಂದಾಗಬೇಕಿದೆ: ಉಪೇಂದ್ರ

Published:
Updated:
Prajavani

ರಾಯಚೂರು: ‘ರಾಷ್ಟ್ರೀಯ ಪಕ್ಷಗಳು ಚುನಾವಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವ ಈ ವ್ಯವಸ್ಥೆಯಿಂದ ಮತದಾರರು ನಂಬಿಕೆ ಕಳೆದುಕೊಳ್ಳುವಂತಾಗಿದ್ದು, ನಾವೂ ಸೇರಿದಂತೆ ಎಲ್ಲರೂ ಬದಲಾಗಿ ವ್ಯವಸ್ಥೆಯ ಸುಧಾರಣೆಗೆ ಮುಂದಾಗಬೇಕಿದೆ’ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಹಾಗೂ ನಟ ಉಪೇಂದ್ರ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಹಾಗೂ ಆರೋಗ್ಯ ವ್ಯಾಪಾರವಾದಂತೆ ರಾಜಕೀಯವೂ ವ್ಯಾಪಾರವಾಗಿದೆ. ಈ ವ್ಯವಸ್ಥೆಯಿಂದ ಯುವಕರು ನಿರಾಸೆಗೊಂಡಿದ್ದು, ಬದಲಾವಣೆ ಬಯಸಿದ್ದಾರೆ ಎಂದರು.

ದೇಶದಲ್ಲಿ ಪ್ರಜಾಪ್ರಭುತ್ವದ ಆಳ್ವಿಕೆ ಜಾರಿಯಲ್ಲಿದ್ದರೂ ವ್ಯಕ್ತಿ ಪೂಜೆ ಮುಂದುವರೆದಿದೆ. ಮತದಾನದ ಹಕ್ಕನ್ನು ಸರಿಯಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ. ಜನರ ಧ್ವನಿಯಾಗಿ ಕಾರ್ಯನಿರ್ವಹಿಸುವ ಪ್ರತಿನಿಧಿಗಳು ಅಗತ್ಯವಾಗಿದ್ದಾರೆ. ಆದ್ದರಿಂದ ಪಕ್ಷದ ಚಿಂತನೆಗಳಿಗೆ ಯುವಕರು ಬೆಂಬಲವಾಗಿ ನಿಂತಿದ್ದಾರೆ. ರಾಜ್ಯದ 22 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ತಿಳಿಸಿದರು.

ರಾಜಕಾರಣಿಗಳಲ್ಲಿ ಒಳ್ಳೆಯವರೂ ಇದ್ದಾರೆ. ಆದರೆ, ಅವರ ಯೋಚನೆಗಳು ಜಾರಿಯಾಗುತ್ತಿಲ್ಲ. ಜನರಲ್ಲಿ ವಿಶ್ವಾಸ ಮೂಡಿದಾಗ ವ್ಯವಸ್ಥೆಯಲ್ಲೂ ಬದಲಾವಣೆ ಬರಲಿದೆ. ರಾಜಕೀಯದಲ್ಲಿ ರಾಜಕಾರಣಿಗಳ ಕುಟುಂಬದವರು ಯೋಗ್ಯತೆ ಇದ್ದರೆ ಮುಂದುವರೆಯುವುದು ತಪ್ಪಲ್ಲ ಎಂದರು.

ಶಾಸಕರಿಗೆ ಹಾಗೂ ಸಂಸದರಿಗೆ ಸರ್ಕಾರದಿಂದ ವೇತನ ನೀಡಲಾಗುತ್ತಿದೆ ಎಂಬುದು ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಭರವಸೆಗಳಿಗೆ ಕಾನೂನಾತ್ಮಕ ಬದ್ಧತೆ ಅಗತ್ಯವಿದೆ. ಬಜೆಟ್‌ನಲ್ಲಿ ಭರವಸೆಗಳನ್ನು ಜಾರಿಗೊಳಿಸದಿದ್ದರೆ ಸದಸ್ಯತ್ವ ರದ್ದುಪಡಿಸುವ ಅಧಿಕಾರ ಜನರಿಗೆ ದೊರೆಯಲು ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕಿದೆ ಎಂದು ನುಡಿದರು.

ಅಭ್ಯರ್ಥಿ ನಿರಂಜನ ನಾಯಕ ಇದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !