ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಚಿಕಿತ್ಸೆಯ ಮಹತ್ವ ತಿಳಿದುಕೊಳ್ಳಿ: ಶೇಖ್ ಮೆಹಬೂಬ್

Last Updated 31 ಜುಲೈ 2019, 14:35 IST
ಅಕ್ಷರ ಗಾತ್ರ

ರಾಯಚೂರು: ವಿಶ್ವದಲ್ಲಿ ಅತ್ಯಂತ ಹೆಚ್ಚು ಅಪಘಾತಗಳಾವುದು ಭಾರತ ದೇಶದಲ್ಲಿ. ಹೀಗಾಗಿ ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆಯ ಮಹತ್ವ ತಿಳಿದುಕೊಳ್ಳಿ ಎಂದು ಶೇಖ್ ಮೆಹಬೂಬ್ ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಮತ್ತು ತಾಲ್ಲೂಕು ಶಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರದಿಂದ ರೂರಲ್ ಮೆಡಿಕಲ್ ಪ್ರ್ಯಾಕ್ಟಿಸರ್ಸ್‌ (ಆರ್.ಎಂ.ಪಿ) ಗಳಿಗೆ ಈಚೆಗೆ ಏರ್ಪಡಿಸಿದ್ದ ಪ್ರಥಮ ಚಿಕಿತ್ಸೆ ಹಾಗೂ ಯುವ ಸ್ಪಂದನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿದಿನ ಹದಿನಾರು ಸಾವಿರ ಜನ ಗಂಡಸರು, ಹೆಂಗಸರು ಹಾಗೂ ಮಕ್ಕಳು ಅಪಘಾತಗಳಲ್ಲಿ ಮರಣ ಹೊಂದುತ್ತಿದ್ದಾರೆ. ಅದೇ ರೀತಿ ಸಾವಿರಾರು ಜನ ಅಪಘಾತಗಳಿಂದ ಅಂಗವಿಕಲರಾಗುತ್ತಿದ್ದಾರೆ ಎಂದು ಹೇಳಿದರು.

ಯುವಪ್ರರ್ವತಕ ಟಿ. ರಾಮಯ್ಯ ನಾಯಕ ಮಾತನಾಡಿ, ಆರೋಗ್ಯ ಮತ್ತು ಜೀವನ ಶೈಲಿ ಸುರಕ್ಷತಾ ವಿಷಯಗಳು, ವ್ಯಕ್ತಿತ್ವ ಬೆಳವಣಿಗೆ, ಭಾವನಾತ್ಮಕ ಹತೋಟಿ, ಸಂಬಂಧಗಳ ವಿಷಯಗಳು, ಶಿಕ್ಷಣ ಮತ್ತು ವೃತ್ತಿ ವಿಷಯಗಳ ಬಗ್ಗೆ ತಿಳಿಸಿದರು.

ಡಾ.ಸಿ. ಅನಿರುದ್ದೀನ್ ಕುಲಕರ್ಣಿ ಮಾತನಾಡಿ, ಪ್ರವಾಹ, ಭೂಕಂಪ, ಬೆಂಕಿ ಅಪಘಾತಗಳು, ಸೀಳು ಗಾಯಾಗಳು, ಸುಟ್ಟಗಾಯಾಗಳು, ಉಸಿರುಗಟ್ಟುವುದು, ಹೃದಯ ಅಪಘಾತಗಳು, ಮೂಳೆಮುರಿತ ಸಂದರ್ಭಗಳಲ್ಲಿ ಮಾಡುವ ಪ್ರಥಮ ಚಿಕಿತ್ಸೆಗಳ ಬಗ್ಗೆ ತಿಳಿಸಿದರು.

ಡಾ. ಚುನ್ನುಮಿಯಾ ಅಧ್ಯಕ್ಷತೆ ವಹಿಸಿದ್ದರು.ಅಬ್ದುಲ್ ನಬೀ, ವಕೀಲ ಎನ್.ಶಿವಶಂಕರ್‌ ಇದ್ದರು.

ಹನುಮಂತು ನಿರೂಪಿಸಿದರು. ತಿರುಮಲೇಶ ಸ್ವಾಗತಿಸಿದರು. ಡಿ.ಎ. ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT