ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾಲಹಳ್ಳಿಯಲ್ಲಿ ನಕಲಿ ನೋಟು ಪತ್ತೆ!

Published : 7 ಆಗಸ್ಟ್ 2024, 15:56 IST
Last Updated : 7 ಆಗಸ್ಟ್ 2024, 15:56 IST
ಫಾಲೋ ಮಾಡಿ
Comments

ಜಾಲಹಳ್ಳಿ: ಪಟ್ಟಣದಲ್ಲಿ ಈಚೆಗೆ ಔಷದ ಅಂಗಡಿಯೊಂದರಲ್ಲಿ ₹500 ಮುಖಬೆಲೆಯ ನಕಲಿ ನೋಟು ಬಂದಿದ್ದು, ಅವರು ಸ್ಥಳೀಯ ಎಸ್.ಬಿ.ಐ ಶಾಖೆಯಲ್ಲಿ ಹಣ ತುಂಬಲು ಹೋದಾಗ ನಕಲಿ ಎಂದು ಗೊತ್ತಾಗಿದೆ.

ಬ್ಯಾಂಕ್‌ನಲ್ಲಿ ನೋಟು ಎಣಿಕೆ ಮಾಡುವ ಯಂತ್ರಕ್ಕೆ‌ ಹಾಕಿದಾಗ ನಕಲಿ ಎಂದು ಗೊತ್ತಾಗಿದೆ. ಬ್ಯಾಂಕ್‌ನವರು ಅದರ ಮೇಲೆ ಕೆಂಪು ಬಣ್ಣದ ಪೆನ್‌ನಿಂದ ಎರಡು ಗೆರೆ ಎಳೆದು ನಕಲಿ ಎಂದು ಬರೆದು ಹಣ ತುಂಬಲು ಬಂದಿರುವ ವ್ಯಕ್ತಿಗೆ ಮರಳಿ ನೀಡಿ ಕಳಿಸಿದ್ದಾರೆ.

ದಿನಕ್ಕೆ ದುಡಿಯುವುದೇ ₹200ರಿಂದ ₹300 ಮಾತ್ರ. ಇಂತಹ ಸ್ಥಿತಿಯಲ್ಲಿ ₹500 ಮುಖಬೆಲೆಯ ಒಂದು ಖೋಟಾ ನೋಟು ಬಂದರೆ ನಮ್ಮ ಬಂಡವಾಳದ ಜೊತೆಗೆ ಲಾಭವೂ ಕಳೆದುಕೊಳ್ಳಬೇಕಾಗುತ್ತದೆ ಎಂದು ವ್ಯಾಪಾರಸ್ಧರು ಅಳಲು ತೋಡಿಕೊಳ್ಳುತ್ತಾರೆ.

ಜಾಲಹಳ್ಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೂಡ ನಕಲಿ ನೋಟುಗಳ ಹಾವಳಿ ಮಿತಿ ಮೀರಿದೆ. ಪಟ್ಟಣದಲ್ಲಿ ಜನದಟ್ಟಣೆ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಖೋಟಾನೋಟುಗಳನ್ನು ಅಕ್ರಮವಾಗಿ ಚಲಾವಣೆ ಮಾಡಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ನಕಲಿ ನೋಟು
ನಕಲಿ ನೋಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT