ಮುದಗಲ್: ಸಮೀಪದ ನಾಗಲಾಪುರ ಗ್ರಾಮದ ರೈತ ಕನಕಪ್ಪ ತಮ್ಮ ಹೊಲದಲ್ಲಿನ ಬೆಳೆಗಳಿಗೆ ಎಸಿ ರೈನ್ ಜೆಟ್ ಅಳವಡಿಸಿ ಕಡಿಮೆ ನೀರಿನಲ್ಲಿ ಉತ್ತಮ ಬೆಳೆಯುತ್ತಿದ್ದಾರೆ.
ಎಸಿ ರೈನ್ ಜೆಟ್ ಮೂಲಕ 7 ಗಂಟೆಗಳಲ್ಲಿ 3 ಎಕರೆ ಬೆಳೆಗೆ ನೀರು ಉಣಿಸಲಾಗುತ್ತಿದೆ. ಈ ಪದ್ಧತಿಯಿಂದ ಭೂಮಿ ಸವಕಳಿ ಬರುವುದಿಲ್ಲ, ಗಟ್ಟಿಯಾಗುವುದಿಲ್ಲ. ಇದರಿಂದ ಎರೆ ಹುಳುಗಳ ಸಂಖ್ಯೆ ಹೆಚ್ಚಾಗಿ ಬೆಳೆಯೂ ಫಲವತ್ತಾಗಿ ಬರುತ್ತದೆ.
ಗಾಳಿಯಲ್ಲಿನ ಸಾರಜನಕ, ರಂಜಕ, ಪೊಟಾಸಿಯಂ ಕಾಂಪ್ಲೆಕ್ಸ್ ನೀರಿನ ಮೂಲಕ ಬೆಳೆ ಮತ್ತು ಭೂಮಿಗೆ ಬೀಳುವದರಿಂದ ಯಾವ ರೋಗಗಳೂ ಬರುವುದಿಲ್ಲ.
‘ಈ ಪದ್ಧತಿ ಅಳವಡಿಸಿಕೊಂಡಿದ್ದರಿಂದ ರೈತನೇ ನಿಂತು ನೀರು ಕಟ್ಟಬೇಕು ಎನ್ನುವಂತಿಲ್ಲ. ಮೋಟರ್ ಪ್ರಾರಂಭ ಮಾಡಿದರೆ ತನ್ನಿಂದ ತಾನೇ ಭೂಮಿಗೆ ನೀರು ಬೀಳುತ್ತದೆ. ಕೊಳವೆ ಬಾವಿಯಲ್ಲಿದ್ದ ಒಂದೂವರೆ ಇಂಚು ನೀರಿನಲ್ಲಿ ನಾಲ್ಕು ಎಕರೆ ನೀರಾವರಿ ಮಾಡಿಕೊಳ್ಳಬಹುದು’ ಎಂದು ರೈತ ಕನಕಪ್ಪ.
ಈ ಪದ್ದತಿ ಅಳವಡಿಸಿಕೊಂಡಿರುವ ಕನಕಪ್ಪ ಅವರು ಸಾವಯವ ಗೊಬ್ಬರ ಬಳಕೆ ಮಾಡಿಕೊಂಡು ತೆಂಗು, ರೇಷ್ಮೆ, ಭತ್ತ, ಜಾನುವಾರಗಳಿಗೆ ಬೇಕಾದ ಮೇವು, ನೆವಣೆ, ತೊಗರಿ, ನುಗ್ಗೆ ಮರ ಸೇರಿದಂತೆ ಅನೇಕ ಬೆಳೆ ಬೆಳೆಯತ್ತಿದ್ದಾರೆ.
ಎಸಿ ರೈನ್ ಜೆಟ್ ಅಳವಡಿಕೆಯಿಂದ ರೈತರು ಕಡಿಮೆ ನೀರನಲ್ಲಿ ಅಧಿಕ ಭೂ ಪ್ರದೇಶಕ್ಕೆ ನೀರುಣಿಸಬಹುದು
ಕನಕಪ್ಪ ನಾಗಲಾಪುರ ರೈತ
ಏನಿದು ಎಸಿರೈನ್ ಜೆಟ್
5–20 ಅಡಿ ಕಂಬಗಳಿಗೆ ತಂತಿ ಕಟ್ಟಿ ಅದಕ್ಕೆ ಡ್ರಿಪ್ ಪೈಪ್‌ಗೆ ಮೈಕ್ರೋ ಪೈಪ್ ಅಳವಡಿಸಿದ ಸಾಧನವನ್ನು ಸಿಕ್ಕಿಸಿ ಮೋಟರ್ ಪ್ರಾರಂಭ ಮಾಡಿದಾಗ ಮಳೆಯ ರೂಪದಲ್ಲಿ ನೀರು ಭೂಮಿಗೆ ಬೀಳುತ್ತದೆ. ಸ್ಪಿಂಕ್ಲರ್ ಪೈಪ್ ಡ್ರಿಪ್ ಪೈಪ್ ಮೈಕ್ರೋ ಪೈಪ್ ಕಂಬ ತಂತಿಗಳು ಬೇಕಾಗುತ್ತವೆ. ಎಲ್ಲವನ್ನೂ ಅವಳಡಿಸಿ ಬಳಿಕ ಮೋಟರ್ ಆರಂಭಿಸಿದಾಗ ಎಸಿ ರೈನ್ ಜೆಟ್ ಮೂಲಕ ಗಾಳಿಯಲ್ಲಿ ಚಿಮ್ಮಿದ ನೀರು ಮೇಲೆ ಹೋಗಿ ಎತ್ತರದಿಂದ ಹನಿಹನಿಯಾಗಿ ಬೆಳೆಗಳ ಬೀಳುತ್ತದೆ.