ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಸಮಸ್ಯೆ ವಿರುದ್ಧ ರೈತರು ಹೋರಾಡಿ’

Last Updated 31 ಜುಲೈ 2019, 14:41 IST
ಅಕ್ಷರ ಗಾತ್ರ

ರಾಯಚೂರು: ರೈತರು ತಮ್ಮ ಸಮಸ್ಯೆಗಳ ವಿರುದ್ಧ ಹೋರಾಡಲು ಸಂಘಟಿತರಾಗಬೇಕು ಎಂದು ಕಾರ್ಮಿಕ ಮುಖಂಡ ಎನ್. ಎಸ್. ವೀರೇಶ್ ಕರೆ ನೀಡಿದರು.

ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಡಕಲಗುಡ್ಡ ಗ್ರಾಮದಲ್ಲಿ ತ-ಕೃಷಿ ಕಾರ್ಮಿಕರ ಸಂಘಟನೆ(ಆರ್.ಕೆ.ಎಸ್) ಸಂಘಟನೆಯ ಗ್ರಾಮ ಘಟಕವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು.

ರೈತರು ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೃಷಿ ದುಬಾರಿಯಾಗಿದೆ. ಬೀಜ, ಗೊಬ್ಬರ, ಕೀಟನಾಶಕಗಳ ಬೆಲೆ ಗಗನಕ್ಕೆ ಮುಟ್ಟಿದೆ. ಬಹುತೇಕ ಜನರು ಕೃಷಿಯನ್ನು ತೊರೆದು ಗುಳೇ ಹೋಗುತ್ತಿದ್ದಾರೆ. ಸರ್ಕಾರಗಳ ನೀತಿಗಳು ರೈತರ ಪರವಾಗಿಲ್ಲ. ಎಲ್ಲಾ ಪಕ್ಷಗಳು ದೊಡ್ಡ ದೊಡ್ಡ ಶ್ರೀಮಂತ ಕಾರ್ಪೋರೇಟ್ ಮನೆತನಗಳ ಪರವಾಗಿವೆ. ಚುನಾವಣೆಗಳಲ್ಲಿ ರೈತ ಪರ ಎಂದು ತೋರಿಸಿಕೊಳ್ಳುವ ಅವರು ಅಧಿಕಾರಕ್ಕೆ ಬಂದ ನಂತರ ರೈತ-ಜನ ವಿರೋಧಿಯಾಗುತ್ತವೆ. ಆದ್ದರಿಂದ ರೈತರು ಒಗ್ಗಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

ಅಡಕಲಗುಡ್ಡ ಗ್ರಾಮ ಘಟಕದ ಅಧ್ಯಕ್ಷರಾಗಿ ಶರಣಪ್ಪ ಹೊಸಮನಿ, ಉಪಾಧ್ಯಕ್ಷರಾಗಿ ಯಲ್ಲಪ್ಪ, ಶಿವಪ್ಪ ಕಾರ್ಯದರ್ಶಿಯಾಗಿ ದುರುಗಣ್ಣ ಗುಳಿಗಿನ್, ಜಂಟಿ ಕಾರ್ಯದರ್ಶಿಯಾಗಿ ಶಿವರಾಜ ಹೊಸಮನಿ ಹಾಗೂ 19 ಜನ ರೈತರು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು.

ಜಿಲ್ಲಾ ಸಂಚಾಲಕ ರಾಮಣ್ಣ ಮರ‍್ಕಂದಿನ್ನಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT