ರಾಯಚೂರು: ರೈತರ ಪಂಪ್ಸೆಟ್ಗಳಿಗೆ ನಿರಂತರವಾಗಿ 12 ತಾಸು ವಿದ್ಯುತ್ ಪೂರೈಕೆ ಮಾಡಬೇಕು. 48 ಗಂಟೆಗಳ ಒಳಗಾಗಿ ವಿದ್ಯುತ್ ಪರಿವರ್ತಕ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಯಚೂರು ತಾಲ್ಲೂಕು ಘಟಕದ ನೇತೃತ್ವದಲ್ಲಿ ರೈತರು ಇಲ್ಲಿನ ಜೆಸ್ಕಾಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ರೈತರ ಜಮೀನುಗಳಿಗೆ ಸರಿಯಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಪರಿವರ್ತಕಕ್ಕೆ ಅರ್ಜಿ ಹಾಕಿದರೂ ವಿಳಂಬ ಮಾಡಲಾಗುತ್ತಿದೆ. ರೈತರು ಕೇಳಿದ 48 ಗಂಟೆಗಳ ಒಳಗೆ ಟಿ.ಸಿ ಒದಗಿಸಿಕೊಡಬೇಕು. ರೈತರ ಹೊಲಗಳ ಮಧ್ಯಗಳಲ್ಲಿ ಕಂಬಗಳು ಬಂದಿದ್ದು, ಇದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದ್ದು, ಸರ್ವೆ ನಡೆಸಿ ಅವುಗಳನ್ನು ಬದಿಗೆ ಅಳವಡಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಎಲ್ಲ ಗ್ರಾಹಕರ ಮೀಟರ್ಗಳಿಗೆ ಸೀಲ್ ಹಾಕಬೇಕು. ಮಾಫಿ ಅಥವಾ ಆರ್.ಆರ್.ನಂಬರ್ ತೆಗೆದು ಹಾಕಬೇಕು. 2023ರಲ್ಲಿ ಹೊಸದಾಗಿ ನೀಡಿರುವ ಆರ್.ಆರ್. ನಂಬರ್ನ ವಿದ್ಯುತ್ ಬಿಲ್ ಸಮಯಕ್ಕೆ ಸರಿಯಾಗಿ ಪಾವತಿಸಲಾಗುತ್ತಿದೆ. ಈಗಿರುವ ಆರ್.ಆರ್. ನಂಬರ್ ಸಂಪರ್ಕ ಕಡಿಗೊಳಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದು, ಇದನ್ನು ತಕ್ಷಣವೇ ಬಗೆಹರಿಸಬೇಕು ಎಂದು ಹೇಳಿದರು.

ನಂತರ ಜೆಸ್ಕಾಂ ಎಂಜಿನಿಯರ್ಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಬಿಚ್ಚಾಲಿ, ನರಸಿಂಗ್ ರಾವ್ ಕುಲಕರ್ಣಿ, ನರಸಪ್ಪ ಹೊಕ್ರಾಣಿ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಕಾರ್ಯಾಧ್ಯಕ್ಷ ಕೆ.ವೀರೇಶ ಗೌಡ ರಾಳದೊಡ್ಡಿ, ಬಾಪೂರು ತಿಮ್ಮಪ್ಪ, ಚಾಲಿಬೆಂಚಿ ಹುಲಿಗೆಪ್ಪ, ಮೆಹಬೂಬ ನೆಲಹಾಳ, ಇಬ್ರಾಹಿಂ ಮಾಸದೊಡ್ಡಿ ಹಾಗೂ ಚಂದಾಸಾಬ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.