ಬಿಜೆಪಿ, ಕಾಂಗ್ರೆಸ್ ನೇರ ಹಣಾಹಣಿ

ಶುಕ್ರವಾರ, ಏಪ್ರಿಲ್ 19, 2019
27 °C
ಕ್ಷೇತ್ರವಾರು ಮುಖಂಡರಿಂದ ಮುಂದುವರಿದ ಪ್ರಚಾರ

 ಬಿಜೆಪಿ, ಕಾಂಗ್ರೆಸ್ ನೇರ ಹಣಾಹಣಿ

Published:
Updated:
Prajavani

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಮರೇಶ್ವರ ನಾಯಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಅವರ ನಡುವೆ ನೇರ‌ ಹಣಾಹಣಿ ಏರ್ಪಟ್ಟಿದೆ.

ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಲೋಕಸಭೆ ಕ್ಷೇತ್ರದಾದ್ಯಂತ ಜನರ ಗಮನ ಸೆಳೆಯುವ ಪ್ರಭಾವ ಬೀರುವ ಮೂರನೇ ಅಭ್ಯರ್ಥಿ ಯಾರಿಲ್ಲ. ಮತಗಳನ್ನು ಸೆಳೆಯುವ ಮೂಲಕ ಮತ‌ ವಿಭಜನೆಗೆ ಕಾರಣವಾಗುವ ಮತ್ತು ಕಾಂಗ್ರೆಸ್, ಬಿಜೆಪಿ ಗೆಲುವಿನ ಲೆಕ್ಕಾಚಾರವನ್ನು ಬುಡಮೇಲು ಮಾಡುವ ಪ್ರಭಾವಿಗಳು ಚುನಾವಣೆ ಕಣದಲ್ಲಿ ಇಲ್ಲ.

ಆದರೆ, ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ಅವರು ಲೋಕಸಭೆ ಕ್ಷೇತ್ರದುದ್ದಕ್ಕೂ ಚಿರಪರಿಚಿತರು. ಅವರು ಪಕ್ಷೇತರ ಅಭ್ಯರ್ಥಿ ಎಂದು ಸ್ಪರ್ಧೆ ಮಾಡಿದ್ದಾರೆ. ಇದರಿಂದಾಗಿ ಬೂತ್ ಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತರ ಪಡೆ ಇಲ್ಲ.‌ ಈಗ ಯಾವುದೇ‌ ಪಕ್ಷದ ಜೊತೆ ಗರುತಿಸಿಕೊಂಡಿಲ್ಲ. ಪಕ್ಷೇತರರಾಗಿ ಸ್ಪರ್ಧೆ ಖಚಿತ, ಯಾವುದೇ ಪಕ್ಷಗಳ ಮುಖಂಡರ ಮನವೊಲಿಕೆಗೆ ಮಣಿಯುವುದಿಲ್ಲ ಎನ್ನುವ ನಿಲುವನ್ನು ರಂಗಪ್ಪ ನಾಯಕ ಅವರು ಪುನರುಚ್ಚಿಸಿದ್ದಾರೆ. 1996 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜನತಾ ದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದುಸಂಸದರಾಗಿದ್ದರು.

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿರುವುದು ಇದೇ ಮೊದಲು. ಕ್ಷೇತ್ರದಲ್ಲಿ ಒಟ್ಟಾರೆ ಮತಗಳನ್ನು ಈ ಇಬ್ಬರೆ ಅಭ್ಯರ್ಥಿಗಳು ಸೆಳೆಯುವ ಪ್ರಯತ್ನ ಮುಂದುವರಿಸಿದ್ದಾರೆ. 2009 ರ ಲೋಕಸಭೆ ಚುನಾವಣೆ ಬಳಿಕ‌ ಕ್ಷೇತ್ರದಲ್ಲಿ ಬಿಜೆಪಿ ತನ್ನದೇ ಆದ ಮತಬ್ಯಾಂಕ್ ಉಳಿಸಿಕೊಂಡು ಬರುತ್ತಿರುವುದು ಗಮನಾರ್ಹ. ಈ ಹಿಂದೆ ನಡೆದ‌‌ ಲೋಕಸಭೆ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷ ಮೂರನೇ ಅಭ್ಯರ್ಥಿಯಾಗಿ ಮತಗಳನ್ನು ಸೆಳೆಯುತ್ತಾ ಬಂದಿದೆ.‌ ಬಹುತೇಕ ತ್ರಿಕೋನ ಸ್ಪರ್ಧೆ ಎದ್ದು ಕಾಣುತ್ತಿತ್ತು. ಈ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿಯೊಂದಿಗೆ ಕಾಂಗ್ರೆಸ್ ನೇರ ಹಣಾಹಣಿ ಏರ್ಪಟ್ಟಿದೆ.

ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಕಾಂಗ್ರೆಸ್ ನಿಂದಲೇ ಎರಡು ಸಲ ಗೆಲುವು ಸಾಧಿಸಿ ಶಾಸಕ ಹಾಗೂ ಸಚಿವರಾಗಿದ್ದವರು.‌ ಲಿಂಗಸುಗೂರು ಮತ್ತು ರಾಯಚೂರು ಕ್ಷೇತ್ರಗಳಲ್ಲಿ ಕೆಲವು ಸಾಂಪ್ರದಾಯಿಕ ಕಾಂಗ್ರೆಸ್ ಮತಗಳನ್ನು ಸೆಳೆಯಲಿದ್ದಾರೆ.‌ ಕ್ಷೇತ್ರದಲ್ಲಿ ಚುನಾವಣೆ ಪೂರ್ವದಲ್ಲಿಯೇ ಕಾಂಗ್ರೆಸ್ ಪ್ರಚಾರ‌ ಆರಂಭಿಸಿದ್ದು, ರಾಜ್ಯಮಟ್ಟದ ನಾಯಕರು ಪ್ರಚಾರ‌ ಸಭೆಯಲ್ಲಿ ಭಾಗವಹಿಸಿ ಬಿ.ವಿ.‌ನಾಯಕ ಪರ ಮತಯಾಚನೆ ಮಾಡಿದ್ದಾರೆ. ಈಗಲೂ ವಿವಿಧೆಡೆ ಆಯೋಜಿಸಿ ಸತ್ತಿರುವ ಪ್ರಚಾರ‌ ಸಭೆಗಳಲ್ಲಿ ಸಚಿವರು ಭಾಗಿಯಾಗುತ್ತಿದ್ದಾರೆ. ಪ್ರಚಾರದ ವಿಷಯದಲ್ಲಿ ಬಿಜೆಪಿ ಕೊಂಚ‌ ಹಿಂದೆ‌ ಬಿದ್ದಿದೆ. ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಇನ್ನೂ ಬಂದಿಲ್ಲ. ಮತದಾರರು ಯಾವ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮಣೆ ಹಾಕುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !