ಗುರುವಾರ , ಅಕ್ಟೋಬರ್ 22, 2020
27 °C

ರಾಯಚೂರಿನಲ್ಲಿ ಅ.15ರಿಂದ ಚಿತ್ರಮಂದಿರ ಆರಂಭವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Raichur film theatre

ರಾಯಚೂರು: ಜಿಲ್ಲೆಯಲ್ಲಿ ಚಲನಚಿತ್ರಮಂದಿರಗಳು ಅಕ್ಟೋಬರ್‌ 15ರಿಂದ ಪ್ರದರ್ಶನ ಆರಂಭಿಸುತ್ತಿಲ್ಲ.

‘ಸರ್ಕಾರದಿಂದ ಅಥವಾ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಯಾವುದೇ ಆದೇಶ ಪತ್ರಗಳು ಬಂದಿಲ್ಲ’ ಎಂದು ಚಿತ್ರ ಮಂದಿರ ನಿರ್ವಹಣೆ ಮಾಡುತ್ತಿರುವ ನೌಕರರು ತಿಳಿಸಿದ್ದಾರೆ.

ಅಕ್ಟೋಬರ್‌ 15ರಿಂದ ಚಲನಚಿತ್ರ ಪ್ರದರ್ಶನ ಆರಂಭಿಸುವುದಕ್ಕೆ ರಾಜ್ಯ ಸರ್ಕಾರವು ಈಗಾಗಲೇ ಅನುಮತಿ ನೀಡಿದೆ. ಆದರೆ, ಆಯಾ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಅಧಿಕೃತವಾಗಿ ಅನುಮತಿ ನೀಡಬೇಕಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌, ‘ಚಿತ್ರಮಂದಿರಗಳಲ್ಲಿ ಕೊರೊನಾ ಸೋಂಕು ತಡೆಗೆ ಯಾವ ರೀತಿ ಮುನ್ನಚ್ಚೆರಿಕೆ ವಹಿಸಿದ್ದಾರೆ ಎಂಬುದನ್ನು ಪರಿಶೀಲಿಸಿಲ್ಲ. ಥಿಯೇಟರ್‌ ಮಾಲೀಕರ ಸಭೆ ಕರೆದು, ಆನಂತರ ಅನುಮತಿ ನೀಡಲಾಗುವುದು. ಇದುವರೆಗೂ ಚಿತ್ರಮಂದಿರಗಳ ಮಾಲೀಕರು ಜಿಲ್ಲಾಡಳಿತದಿಂದ ಅನುಮತಿಯನ್ನು ಕೋರಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು