ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಪ್ರವಾಹ: ಸೇತುವೆ, ರಸ್ತೆಗಳಿಗೆ ಹಾನಿ

Last Updated 16 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 5 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಮುಳುಗಿರುವ ಸೇತುವೆಗಳು ಇನ್ನೂ ಸಂಪರ್ಕಕ್ಕೆ ತೆರೆದುಕೊಂಡಿಲ್ಲ.

ರಾಯಚೂರು–ಕಲಬುರ್ಗಿ ಮಾರ್ಗದಲ್ಲಿರುವ ದೇವದುರ್ಗ ತಾಲ್ಲೂಕಿನ ಹೂವಿನಹೆಡ್ಗಿ ಸೇತುವೆ ಇನ್ನೂ ಜಲಾವೃತವಾಗಿದೆ. ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆಗಳಿಗೆ ಸಂಪ ರ್ಕಿಸುವ ಜಲದುರ್ಗ ಸೇತುವೆ ಮತ್ತು ಯರಗೋಡಿ ಸೇತುವೆ ಮೇಲಿನ ನೀರು ತೆರವಾಗಿದೆ. ಆದರೆ, ಜಲದುರ್ಗ ಸೇತುವೆ ಹಾಳಾಗಿದ್ದು, ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಮರಳಿದ ಗ್ರಾಮಸ್ಥರು: ಸ್ಥಳಾಂತರಿಸಲಾಗಿದ್ದ ನದಿ ತೀರದ 23 ಗ್ರಾಮಗಳ ಜನರು ಮನೆಗಳತ್ತ ಮರಳುತ್ತಿದ್ದಾರೆ.

ಸಂಪೂರ್ಣ ಸ್ಥಳಾಂತರಿಸಿರುವ 13 ಗ್ರಾಮಗಳ ಜನರು ಇನ್ನೂ ಪರಿಹಾರ ಕೇಂದ್ರಗಳಲ್ಲಿ ಉಳಿದಿದ್ದು, ಜಿಲ್ಲಾಡಳಿತದಿಂದ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.

ಕೊಪ್ಪಳ ವರದಿ: ತುಂಗಭದ್ರಾ ಜಲಾಶಯದಿಂದ 1.50 ಲಕ್ಷ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. ಪ್ರವಾಹದಿಂದ ಚಿಕ್ಕಜಂತಕಲ್-ಕಂಪ್ಲಿ ಸೇತುವೆ ಮೇಲಿನ ರಸ್ತೆ ಕಿತ್ತು ಹೋಗಿದ್ದರಿಂದ ಸಂಚಾರ ಬಂದ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT