ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಪಾಲಿಸಿದರೆ ಜೀವನ ಸುಗಮ: ಎಂ.ಸಿ. ನಾಡಗೌಡ

Last Updated 12 ಡಿಸೆಂಬರ್ 2018, 13:03 IST
ಅಕ್ಷರ ಗಾತ್ರ

ರಾಯಚೂರು: ‘ನಮ್ಮ ಜೀವನಕ್ಕೆ ನಾವೇ ಶಿಲ್ಪಿಗಳು. ಕಾನೂನುಗಳನ್ನು ಪಾಲಿಸಿದರೆ ಜೀವನ ಸುಗಮವಾಗಿರುತ್ತದೆ’ ಎಂದು ಸುಪ್ರೀಂಕೋರ್ಟ್‌ ವಕೀಲ ಎಂ.ಸಿ. ನಾಡಗೌಡ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಉಚಿತ ಕಾನೂನು ಸೇವಾ ಪ್ರಾಧಿಕಾರ, ಹೈದರಾಬಾದ್‌ ಕರ್ನಾಟಕ ಹ್ಯುಮನ್‌ ರೈಟ್ಸ್‌ ಕೌನ್ಸಿಲ್‌ ಹಾಗೂ ಜಿಲ್ಲಾ ಕಾರಾಗೃಹದಿಂದ ಈಚೆಗೆ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎಂ.ಸಿ. ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೈದರಾಬಾದ್‌ ಕರ್ನಾಟಕ ಹ್ಯುಮನ್‌ ರೈಟ್ಸ್‌ ಕೌನ್ಸಿಲ್‌ ಅಧ್ಯಕ್ಷ ಚಂದ್ರಕಾಂತ ಮುನ್ನೊಳ್ಳಿ ಮಾತನಾಡಿ, ಜೀವನವು ಒಂದು ಸುಂದರವಾದ ಕೊಡುಗೆಯಾಗಿದ್ದು, ಒಳ್ಳೆಯ ಕೆಲಸ ಮಾಡುವ ಮೂಲಕ ಅರ್ಥ ಮಾಡಿಕೊಳ್ಳಬೇಕು ಎಂದರು.

ವಕೀಲ ನೀಲಕಂಠರಾವ್‌ ಅವರು ಕಾನೂನು ಸದುಪಯೋಗ ಮತ್ತು ದುರುಪಯೋಗ ಕುರಿತು ಮಾತನಾಡಿದರು. ಅಬ್ದುಲ್‌ ಸಿಕೂರ್‌ ಅವರು ಕಾನೂನು ಪಾಲನೆ ಕುರಿತು ಮಾತನಾಡಿದರು.

ಮಹೇಂದ್ರ ರೆಡ್ಡಿ, ಕೇಶವರೆಡ್ಡಿ, ರಾಘವೇಂದ್ರ, ತಾಯಪ್ಪ, ಎಲ್‌.ಜಿ. ಶಿವುಕುಮಾರ್‌, ಗೌರಿಶಂಕರ, ಸಿದ್ಧಲಿಂಗಯ್ಯ ಸ್ವಾಮಿ, ಜಾಗೃತಿ, ಪ್ರೀತಿ ಕಾರಂಜಿ, ಮಂಜುಶ್ರೀ, ಮೃತ್ಯುಂಜಯ ಹಿರೇಮಠ, ತಿಪ್ಪಣ್ಣ ಇದ್ದರು.

ರಾಮಾಚಾರಿ ಸ್ವಾಗತಿಸಿದರು. ಪ್ರದೀಪಕುಮಾರ್ ಮುನ್ನೊಳ್ಳಿ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT