ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಯೊಂದಿಗೆ ಕೃತಿ ರಚನೆ ಶ್ಲಾಘನೀಯ: ಶ್ರೀರಾಮ ಬೂಬ್

ಪ್ರಾಧ್ಯಾಪಕ ಅನಿಲ ಅಪ್ರಾಳ್ ಅವರು ಬರೆದ ಕೃತಿಗಳ ಬಿಡುಗಡೆ
Last Updated 30 ಮಾರ್ಚ್ 2019, 12:56 IST
ಅಕ್ಷರ ಗಾತ್ರ

ರಾಯಚೂರು: ವೃತ್ತಿಯ ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪುಸ್ತಕಗಳನ್ನು ರಚಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ತಾರಾನಾಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀರಾಮ ಬೂಬ್ ಹೇಳಿದರು.

ನಗರದ ಎಲ್.ವಿ.ಡಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರೊ. ಅನಿಲ ಅಪ್ರಾಳ ಅವರು ಬರೆದ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶಕುಂತಲಾ ಗೊಪಶೆಟ್ಟಿ ಮಾತನಾಡಿ, ‘ಪ್ರತಿಯೊಂದು ಭಾಷಾ ವಿಭಾಗದಿಂದ ಹಿಗೆಯೇ ಪ್ರತಿಯೊಬ್ಬರು ತಮ್ಮ ವಿಷಯಗಳ ಮಹತ್ವವನ್ನು ಪುಸ್ತಕ ರೂಪದಲ್ಲಿ ಹೊರತರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ ಮಾತನಾಡಿ, ಶಿಕ್ಷಣರಂಗದಲ್ಲಿ ಉಪಯೋಗವಾಗುವ ಇಂತಹ ಪುಸ್ತಕಗಳು ಇನ್ನೂ ಹೆಚ್ಚಾಗಿ ಹೊರತರಲಿ ಎಂದರು.

ಎಸ್.ಸಿ.ಎ.ಬಿ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರ್‌ಮನ್ ವೀರಭದ್ರಪ್ಪ,

ಕಾಲೇಜಿನ ಪ್ರಾಚಾರ್ಯ ಪ್ರೊ. ಚಂದ್ರಕಾಂತ ಮತ್ತು ಉಪ ಪ್ರಾಚಾರ್ಯ ಪ್ರೊ. ಪಿ.ಹೆಚ್ ನರಹಟ್ಟಿ ಮಾತನಾಡಿದರು.

ಮಸ್ಕಿ ನಾಗರಾಜ ರವರು ಮತ್ತು ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥ ಪ್ರೊ.ಟಿ.ವೆಂಕಟೇಶ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ‘ಫಿಗರ್ಸ್‌ ಆಫ್‌ ಸ್ಪೀಚ್’, ಪದಗಳನ್ನು ಯಾವ ಸಮಯದಲ್ಲಿ ಹೇಗೆ ಬಳಸಬೇಕು ಎಂಬುದರ ಕುರಿತ ‘ರೈಟ್ ವರ್ಡ್ಸ್ ಆಂಡ್ ರೈಟ್ ಪ್ಲೇಸ್’, ಸಂಶೋಧನಾ ಅಧ್ಯಯನ ಕೃತಿ ‘ಚಂದ್ರಶೇಖರ ಕಂಬಾರ್‌ ಟು ಪ್ಲೇಸ್ ಎ ಸ್ಟಡಿ’, ಹಾಗೂ ಎಲ್.ವಿ.ಡಿ ಮಹಾವಿದ್ಯಾಲಯದ ಇಂಗ್ಲಿಷ್‌ ವಿಭಾಗದಿಂದ ಆಯೋಜಿಸಿದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ವಿವಿಧ ಮಹಾವಿದ್ಯಾಲಯಗಳಿಂದ ಪ್ರತಿನಿಧಿಗಳು ಭಾಗವಹಿಸಿ ಅವರು ಮಂಡಿಸಿರುವ ಲೇಖನಗಳಲ್ಲಿ ಉತ್ತಮವಾದ 25 ಲೇಖನಗಳನ್ನು ಒಳಗೊಂಡ ‘ಕಮ್ಯೂನಿಕೇಷನ್ ಸ್ಕಿಲ್ಸ್ ಆಂಡ್ ಎಂಪ್ಲಾಯಿಮೆಂಟ್ ಆಪರ್ಚುನಿಟೀಸ್’ ಕೃತಿಗಳನ್ನು ಬಿಡುಗಡೆ ಮಾಡಿದರು.

ಪ್ರೊ. ವಿರೇಶಪ್ಪ, ಪ್ರೊ. ವೇದವ್ಯಾಸ, ಡಾ. ಶೀಲಾ ದಾಸ, ಪ್ರೊ.ಬಷೀರುನ್ನಿಸಾ ಬೇಗಂ, ಡಾ. ಅರುಣಾ ಹಿರೇಮಠ, ಪ್ರೊ.ಜಯಾ ಡೋಂಗ್ರೆ, ಪ್ರೊ.ಯಾಸ್ಮೀನ ಜಹಾ, ಡಾ. ಸರಸ್ವತಿ, ಪ್ರೊ. ರಾಜಶೇಖರ, ಡಾ. ಮಲ್ಕಣ್ಣ, ಪ್ರೊ.ಅಮರೇಗೌಡ, ಪ್ರೊ. ಚನ್ನಾಮಲ್ಲಿಕಾರ್ಜುನ, ಡಾ. ಕಮಲಾ ನವರತ್ನ, ಪ್ರೊ. ಎಂ.ಎ. ಕರೀಮ್, ಡಾ. ರವಿಕುಮಾರ, ಪ್ರೊ.ವೆಂಕಟೇಶ, ಪ್ರೊ.ಚೆನ್ನಾರೆಡ್ಡಿ, ಪ್ರೊ.ವಿರೇಶ ಶ್ರೀ ರಾಘವೇಂದ್ರ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT