ಮಂಗಳವಾರ, ಫೆಬ್ರವರಿ 25, 2020
19 °C

9 ರಂದು ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರದ ರೋಟರಿ ಕಾಟನ್‌ ಸಿಟಿ ಮತ್ತು ಕಲಬುರ್ಗಿಯ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆಯಿಂದ ಫೆಬ್ರುವರಿ 9 ರಂದು ನವಚೇತನ ಶಾಲೆಯಲ್ಲಿ ಉಚಿತ ಕ್ಯಾನ್ಸರ್‌ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ರೋಟರಿ ಕಾಟನ್‌ ಸಿಟಿಯ ಶಿವಗಿರೀಶ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ದೇಶದಲ್ಲಿ ಕ್ಯಾನ್ಸರ್‌ ರೋಗ ಅತಿಹೆಚ್ಚಾಗಿ ಹರಡಿಕೊಳ್ಳುತ್ತಿದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಉಚಿತವಾಗಿ ತಪಾಸಣೆ ನಡೆಸುವುದು ಶಿಬಿರದ ಉದ್ದೇಶವಾಗಿದೆ ಎಂದರು.

ಡಾ.ಶಾಂತಲಿಂಗ ನಿಗ್ಗುಡಗಿ ಮಾತನಾಡಿ, ಇದೇ ರೀತಿ ಶಿಬಿರಗಳನ್ನು ವಿವಿಧ ಕಡೆಗಳಲ್ಲಿ ಮಾಡಲಾಗಿದೆ. ಫೆಬ್ರುವರಿ 4 ವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ಅರಿವು ಮೂಡಿಸುವ ಕಾರ್ಯ ಆರಂಭಿಸಲಾಗಿದೆ. 2020 ರಲ್ಲಿ ಕ್ಯಾನ್ಸರ್‌ ರೋಗ ಶೇ 7 ರಿಂದ ಏರಿಕೆಯಾಗುವ ಸಾಧ್ಯತೆ ಇದೆ ಎಂದರು.

ಸ್ತ್ರೀಯರಲ್ಲಿ ಸ್ತನ ಗಂಟುಗಳಿದ್ದರೆ ವೈದ್ಯರ ಸಲಹೆ ಪಡೆಯಬೇಕು. ಥಾರೈಡ್‌ ಗಂಟುಗಳಿದ್ದರೆ ತೂಕ ಕಡಿಮೆಯಾಗುವುದು. ಹಸಿವು ಆಗದೆ ಇರುವ ಲಕ್ಷಣಗಳಿರುತ್ತವೆ. ಇಂಥವರು ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ಅವಕಾಶವಿದೆ. ಕ್ಯಾನ್ಸರ್‌ ಪ್ರಾರಂಭದಲ್ಲಿದ್ದರೆ ಚಿಕಿತ್ಸೆ ಪಡೆಯಬಹುದಾಗಿದೆ. ಜನರು ಸ್ವಯಂ ಪ್ರೇರಿತರಾಗಿ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

ಈರಣ್ಣ ಚಿತ್ರಗಾರ, ತಿಮ್ಮನಗೌಡ, ಅಶೋಕ ಅಂತರಗಂಗಿ, ಶರಣಗೌಡ, ಎಂ.ಕೆ. ವೆಂಕಟೇಶ, ಡಾ.ಶಶಿಧರ ಮೂಲಿಮನಿ, ಸೋಮನಾಥ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)