ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ | ಎರಡು ಗುಂಪುಗಳ ನಡುವೆ ಘರ್ಷಣೆ: ನಿಷೇಧಾಜ್ಞೆ ಜಾರಿ

Last Updated 1 ಜೂನ್ 2022, 14:40 IST
ಅಕ್ಷರ ಗಾತ್ರ

ಗಂಗಾವತಿ: ನಗರದ ಲಕ್ಷ್ಮೀಕ್ಯಾಂಪಿನಲ್ಲಿ ನಗರಸಭೆ ಕಾಯ್ದಿರಿಸಿದ ಉದ್ಯಾನದ ಜಾಗದಲ್ಲಿ ಮುಸ್ಲಿಮರು ಶೆಡ್‌ ನಿರ್ಮಿಸಿ ಪ್ರಾ ರ್ಥನೆ ನಡೆಸುತ್ತಿದ್ದಾರೆ ಎಂದು ಹಿಂದೂ ಸಮಾಜದವರು ಆಕ್ಷೇಪಿಸಿದ್ದಾರೆ. ಈ ಕಾರಣಕ್ಕಾಗಿ ಎರಡು ಸಮುದಾಯದ ಜನರ ನಡುವೆ ಮಾತಿನ ಚಕಮಕಿ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಘಟನಾ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ ಭೇಟಿ ನೀಡಿದರು. ಪೊಲೀಸರು ಎರಡೂ ಗುಂಪಿನ ಜನರನ್ನು ಸಮಾಧಾನ ಪಡಿಸಿ ಸ್ಥಳದ ದಾಖಲೆಗಳನ್ನು ನಗರಸಭೆಗೆ ಸಲ್ಲಿಸುವಂತೆ ಸೂಚಿಸಿದರು. ಜೂನ್‌ 3ರ ತನಕ ನಿಷೇಧಾಜ್ಞೆ ಹೇರಲಾಗಿದೆ.

ಬುಧವಾರ ಮಧ್ಯಾಹ್ನ ಎರಡು ಗುಂಪಿನವರ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಲಕ್ಷ್ಮೀಕ್ಯಾಂಪಿನ ಲೇ ಔಟ್‌ವೊಂದರಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುತ್ತಿದ್ದ ಸ್ಥಳ ಹಿಂದೆ ನಗರಸಭೆ ಕಾಯ್ದಿರಿಸಿದ್ದ ಉದ್ಯಾನವೆಂದು ಗೊತ್ತಾಗಿದೆ.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ವಿರೂಪಾಕ್ಷ ಮೂರ್ತಿ ‘ಕೆಲ ದಿನಗಳ ನಂತರ ಆ ಸ್ಥಳವನ್ನು ಆರು ನಿವೇಶನಗಳನ್ನಾಗಿ ವಿಂಗಡಿಸಿ ಕೆಲವರು ಆಶ್ರಯ ಪಡೆದುಕೊಂಡಿದ್ದರು. ಅದರಲ್ಲಿ ಒಂದು ನಿವೇಶನವನ್ನು ದಾನದ ರೂಪದಲ್ಲಿ ಮುಸ್ಲಿಮರಿಗೆ ನೀಡಲಾಗಿದೆ ಎಂದು ಆ ಸಮಾಜದವರು ವಾದಿಸುತ್ತಿದ್ದಾರೆ. ಆದರೆ, ದಾಖಲೆಗಳನ್ನು ಪರಿಶೀಲಿಸಿದಾಗ ಇದು ಮುಸ್ಲಿಮ್‌ ಸಮಾಜಕ್ಕೆ ವರ್ಗಾವಣೆಯಾಗಿಲ್ಲ. ನಗರಸಭೆಯ ಸುಪರ್ದಿಯಲ್ಲಿಯೇ ಇದೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT