ಗಂಗಾವತಿ: ‘ಈಡಿಗ ಸಮಾಜದ ಬೇಡಿಕೆಗಳ ಈಡೇರಿಕೆ ವಿಚಾರವಾಗಿ ಏ.4ರಂದು ಹಮ್ಮಿಕೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ನಿವಾಸದ ಮೇಲೆ ಮುತ್ತಿಗೆಯನ್ನು ಸದ್ಯ ಕೈ ಬಿಡಲಾಗಿದೆ’ ಎಂದು ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಡಿಗ ಸಮುದಾಯದ 18 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಆ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಶಿವರಾಜ ತಂಗಡಗಿ ಮನವಿ ಸ್ವೀಕರಿಸಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಸಚಿವರು ಭರವಸೆ ಈಡೇರಿಸದ ಕಾರಣ ಮನೆ ಮುತ್ತಿಗೆಗೆ ನಿರ್ಧಾರ ಕೈಗೊಳ್ಳಲಾಗಿತ್ತು’ ಎಂದರು.

‘ಇನ್ನೂ ನಮ್ಮದೇ ಸಮುದಾಯದ ಸಚಿವ ಮಧು ಬಂಗಾರಪ್ಪ ಸಮುದಾಯ ದ್ರೋಹಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಬಜೆಟ್ನಲ್ಲಿ ಈಡಿಗ ಸಮಾಜಕ್ಕೆ ನಯಾಪೈಸೆ ಬಿಡುಗಡೆ ಆಗಿಲ್ಲ. ಈ ಬಗ್ಗೆ ಮಧು ಬಂಗಾರಪ್ಪನವರು ಪ್ರಶ್ನೆ ಮಾಡಲ್ಲ. ಸಿಎಂಗೆ ಭೇಟಿ ಮಾಡಿಸದಂತೆ ತಂಗಡಗಿ ಮೇಲೆ ಒತ್ತಡ ಹೇರಿ, ತಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡುವ ಶಕ್ತಿ ಇದ್ದ ಈಡಿಗ ಸಮಾಜಕ್ಕೆ ಒಂದು ಮುಖ್ಯಮಂತ್ರಿ ಭೇಟಿ ಮಾಡುವ ಅವಕಾಶ ಸಿಗದಿರುವುದು ದುರಂತ. ಅಲ್ಲದೇ ನಾವು ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಕೆಲವರು ಬಿಜೆಪಿ ಘೋಷಿತ ಎನ್ನುತ್ತಿದ್ದಾರೆ. ಕಾಲವೇ ಮುಂದೆ ಉತ್ತರ ನೀಡಲಿದೆ’ ಎಂದರು.

ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಕಾಶಿ ವಿಶ್ವನಾಥ, ಪರಮೇಶ, ಯರಡೋಣ ನಾಗಪ್ಪ, ವಿರೇಶ, ಹನುಮಂತರಾಯ, ಶಾಂತಪ್ಪ, ಅಂಬುಜಮ್ಮ, ಆನಂದಬಾಬು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-35-991579561

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.