ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಯೋಜನೆ ಆರಂಭಿಸಲು ಮಾಹಿತಿ ಅಗತ್ಯ

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಹ್ಮದ್ ಇರ್ಫಾನ್ ಹೇಳಿಕೆ
Last Updated 1 ಮಾರ್ಚ್ 2019, 12:12 IST
ಅಕ್ಷರ ಗಾತ್ರ

ರಾಯಚೂರು: ಯಾವುದೇ ಯೋಜನೆ ಆರಂಭಿಸಲು ಅದರ ಸಮಗ್ರವಾದ ಮಾಹಿತಿ ಪಡೆಯುವುದು ಮುಖ್ಯ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಹ್ಮದ್ ಇರ್ಫಾನ್ ಹೇಳಿದರು.

ನಗರದ ಎಸ್.ಎಲ್.ವಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಪಂಚಾಯಿತಿ, ಕೈ ಮಗ್ಗ ಮತ್ತು ಜವಳಿ ಇಲಾಖೆ 2018–19ನೇ ಸಾಲಿನ ನೂತನ ಜವಳಿ ನೀತಿಯೋಜನೆಯಡಿಯಲ್ಲಿ ಎರಡು ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನಿರುದ್ಯೊಗದ ಸಮಸ್ಯೆ ಹೆಚ್ಚಾಗಿದ್ದು ಕೈ ಮಗ್ಗ ಮತ್ತು ಜವಳಿ ಕ್ಷೇತ್ರದಲ್ಲಿ ಯುವಕರು ಉದ್ಯೋಗ ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ರೈತರು ಹತ್ತಿ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅದನ್ನು ಬೇರೆ ದೇಶಕ್ಕೆ ಏಕೆ ರಫ್ತು ಮಾಡಬೇಕು. ಇಲ್ಲಿಯೆ ಅದರ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಸ್ವಯಂ ಉದ್ಯೋಗ ಮಾಡಬೇಕು ಎಂದರು.

ಈ ಕ್ಷೇತ್ರದಲ್ಲಿ ಸರ್ಕಾರ ವತಿಯಿಂದ ಹಲವಾರು ಸೌಲಭ್ಯಗಳಿದ್ದು ಇವುಗಳನ್ನು ಸದುಪಯೋಗ ಪಡೆದುಕೊಳ್ಳಲು ಯುವಕರು ಮುಂದೆ ಬರಬೇಕು ಎಂದು ಹೇಳಿದರು.

ಫ್ಯಾಕ್ಟರಿ ಮಾಲಿಕರ ಸಂಘದ ಅಧ್ಯಕ್ಷ ಲಕ್ಷ್ಮೀರೆಡ್ಡಿ ಮಾತನಾಡಿ, ಪಕ್ಕದಲ್ಲಿರುವ ತೆಲಂಗಾಣ ರಾಜ್ಯದಲ್ಲಿ ಜವಳಿ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ರಾಜ್ಯದಲ್ಲೂ ಸ್ಥಳೀಯ ಶಾಸಕರು ಇದಕ್ಕೆ ಒತ್ತುಕೊಟ್ಟರೆ ಮುಂದಿನ ದಿನಗಳಲ್ಲಿ ನಿರುದ್ಯೋಗ ಹೋಗಲಾಡಿಸಿ ಯುವಕರಿಗೆ ಉದ್ಯೊಗ ಕಲ್ಪಿಸಿದಂತಾಗುತ್ತದೆ. ಕೈಮಗ್ಗ ಮತ್ತು ಜವಳಿ ಇಲಾಖೆ ಕ್ಷೇತ್ರಬೆ ಳೆಯಬೇಕೆಂದರೆ ಮೊದಲು ಗ್ರಾಮೀಣ ಪ್ರದೇಶದಲ್ಲಿ ಇದರ ಪ್ರಚಾರ ಮಾಡಿದಾಗ ಮಾತ್ರ ಈ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕೈಮಗ್ಗ ಮತ್ತು ಜವಳಿ ಇಲಾಖೆ ಉತ್ತರ ವಲಯದ ಬಳ್ಳಾರಿ ಜಂಟಿ ನಿರ್ದೇಶಕ ಶ್ರೀಧರ್ ನಾಯಕ್ ಮಾತನಾಡಿ, ದೇಶದಲ್ಲಿ ಶೇ 64 ರಷ್ಟು 35 ವಯಸ್ಸಿನ ಯುವಕರಿದ್ದಾರೆ. ದೇಶದಲ್ಲಿ ಕೃಷಿ ಕ್ಷೇತ್ರ ಪ್ರಥಮ ಸ್ಥಾನದಲ್ಲಿದ್ದು ನಂತರದಲ್ಲಿ ಜವಳಿ ಕ್ಷೇತ್ರ ಇದೆ ಎಂದರು.

ಈ ಕ್ಷೇತ್ರದಲ್ಲಿ ಮೊದಲು ತರಬೇತಿ ಮೂಲಕ ಅರಿವು ಮೂಡಿಸಬೇಕು. ಸರ್ಕಾರದಿಂದ ಸಹಾಯಧನ ಹಾಗೂ ಬ್ಯಾಂಕುಗಳಿಂದ ಸಾಲ ಪಡೆದು ಉದ್ದಿಮೆಗಳನ್ನು ಮಾಡಿ, ಅಭಿವೃದ್ಧಿ ಸಾಧಿಸಬೇಕು ಎಂದು ಹೇಳಿದರು.

ಯೂತ್ ಆಪ್ರಂಟೆಸಿಪ್ ಸರ್ವಿಸ್ ಕೇಂದ್ರದ ವ್ಯವಸ್ಥಾಪಕಿ ಕೋಮಲ್ ಮಾತನಾಡಿ, ನ್ಯಾಪ್ಸ್‌ ಇದೊಂದು ಪ್ರಧಾನ ಮಂತ್ರಿ ಹೊಸ ಯೋಜನೆಯಾಗಿದೆ. ಇದು ಅಪ್ರೆಂಟಿಸಿಪ್ ಯುವಕರಿಗಾಗಿ ಉದ್ಯೋಗ ನೀಡುವ ಯೋಜನೆಯಾಗಿದೆ. ಅಪ್ರೆಂಟಿಸಿಪ್ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಅಪ್ರೆಂಟಿಸಿಪ್ ಒಂದು ಕೌಶಲ ತರಬೇತಿ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳ ವಿದ್ಯಾರ್ಹತೆ ಮತ್ತು 14 ವರ್ಷದಿಂದ ಮೇಲ್ಪಟ್ಟವರು ಇದರಲ್ಲಿ ತರಬೇತಿ ಪಡೆದುಕೊಳ್ಳಬಹುದು. ಕಂಪನಿಯ ಕೆಲಸದ ಆಧಾರದ ಮೇಲೆ ಹೆಚ್ಚು ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಬಹುದಾಗಿದೆ. ಇದರಿಂದ ಗ್ರಾಮೀಣ ಮಟ್ಟದ ನಿರುದ್ಯೋಗಿ ಯುವಕರಿಗೆ ಸಹಕಾರವಾಗಲಿದೆ ಎಂದು ತಿಳಿಸಿದರು.

ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕ ಜಿ.ಯು.ಹುಡೇದ್, ವಾಣಿಜ್ಯ ಕೈಗಾರಿಕರಣ ಮಂಡಳಿ ಮಾಜಿ ಅಧ್ಯಕ್ಷ ನಾಗನಗೌಡ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಎಸ್.ಹೊಸಮನಿ ಹಾಗೂ ಫ್ಯಾಕ್ಟರಿ ಮಾಲೀಕರು, ಉದ್ದಿಮೆದಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT