ಮಕ್ಕಳ ಜ್ಞಾನ ವಲಯಕ್ಕೆ ಸ್ಪಂದಿಸಿ: ವಿಜಯಕುಮಾರ

7

ಮಕ್ಕಳ ಜ್ಞಾನ ವಲಯಕ್ಕೆ ಸ್ಪಂದಿಸಿ: ವಿಜಯಕುಮಾರ

Published:
Updated:
Deccan Herald

ರಾಯಚೂರು: ಮಕ್ಕಳು ಪ್ರಾರಂಭದಲ್ಲಿ ಅತೀ ಸೂಕ್ಷ್ಮಮತಿಗಳಾಗಿದ್ದು, ಪಾಲಕರು ಅವರ ಆಸಕ್ತಿಗೆ ಪೂರಕವಾದ ವಾತಾವರಣ ಒದಗಿಸಬೇಕು ಎಂದು ಕಲಬುರ್ಗಿ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ವಿಜಯಕುಮಾರ ಹೇಳಿದರು.

ಜಿಲ್ಲೆಯ ದೇವದುರ್ಗ ತಾಲ್ಲೂಕು ಗಬ್ಬೂರು ಗ್ರಾಮದ ವಿದ್ಯಾಜ್ಯೋತಿ ನವೋದಯ ತರಬೇತಿ ಶಾಲೆಯಲ್ಲಿ ಈಚೆಗೆ ನಡೆದ ಜವಾಹರ ನವೋದಯ, ಸೈನಿಕ,ಕಿತ್ತೂರು ಹಾಗೂ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ಮಕ್ಕಳಿಗೆ ಅಭಿನಂದನಾ ಸಮಾರಂಭ ಮತ್ತು ಪಾಲಕರ ಸಭೆಯಲ್ಲಿ ಮಾತನಾಡಿದರು.

ಆರಂಭಿಕ ಹಂತದಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸುವುದರಿಂದ ಮುಂದೆ ಸಮಾಜ ಹಾಗೂ ದೇಶದ ಆಸ್ತಿಯಾಗುತ್ತಾರೆ. ಮಕ್ಕಳನ್ನು ಇನ್ನೊಂದು ಮಗುವಿನ ಜೊತೆ ಹೋಲಿಕೆ ಮಾಡುವುದಾಗಲಿ ಅಥವಾ ಅವರನ್ನು ಕೀಳರಿಮೆಯಿಂದ ಪಾಲಕರು ನೋಡಬಾರದು ಎಂದು ತಿಳಿಸಿದರು.

ಮಕ್ಕಳ ಸೂಪ್ತ ಪ್ರತಿಭೆಯನ್ನು ಶಿಕ್ಷಕರು, ಪಾಲಕರು ಗುರುತಿಸಿ ಪೋಷಿಸುವ ಕೆಲಸ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ಬಸವರಾಜ ಸ್ವಾಮಿ ಮಾತನಾಡಿ, ಗುಣಮಟ್ಟದ ಶಿಕ್ಷಣ ಇಂದಿನ ದಿನಗಳಲ್ಲಿ ಕುಸಿಯುತ್ತಿದೆ. ಶಿಕ್ಷಕರು ಪಾಲಕರು ಮಕ್ಕಳನ್ನು ಜವಾಬ್ದಾರಿಯುತವಾಗಿ ಬೆಳೆಸಿ ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ತಿಳಿಸಿದರು.

ವಿದ್ಯಾಜ್ಯೋತಿ ನವೋದಯ ತರಬೇತಿ ಕೇಂದ್ರದ ಸಂಚಾಲಕ ಚನ್ನಪ್ಪ ಪ್ರಾಸ್ತಾವಿಕ ಮಾತನಾಡಿ, 2017–18 ನೇ ಸಾಲಿನಲ್ಲಿ ತಮ್ಮ ಸಂಸ್ಥೆಯಿಂದ ಜವಾಹರ ನವೋದಯ ಶಾಲೆಗೆ 58 ವಿಧ್ಯಾರ್ಥಿಗಳು, ಸೈನಿಕ ಶಾಲೆಗೆ 39 ಹಾಗೂ ಕಿತ್ತೂರು ವಸತಿ ಶಾಲೆಗೆ 26 ವಿಧ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ವಿವಿಧ ವಸತಿ ಶಾಲೆಗೆ ಆಯ್ಕೆಯಾದ ಎಲ್ಲಾ ವಿಧ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಸನ್ಮಾನ ಮಾಡಲಾಯಿತು. ಮಕ್ಕಳ ಪಾಲಕರು ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !