ದೇವದುರ್ಗ: ತಾಲ್ಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಹೀರಾಲಾಲ ಮತ್ತೆ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾದ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜು.2ರಂದು ಎಇಇ ಹೀರಾಲಾಲ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬೆನಕನಹಳ್ಳಿಯ ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲಾಖೆಯ ವಾಹನದಲ್ಲಿ ಕುಟುಂಬ ಸಮೇತರಾಗಿ ತೆರಳಿದ್ದರು.

ಜು.3ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಸುದ್ದಿ ಉಲ್ಲೇಖಿಸಿ ರಾಯಚೂರು ಇಇ ನಾಗೇಶ ಅವರು ಎಇಇ ಹೀರಾಲಾಲ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು.

ಮೇಲಧಿಕಾರಿ ನೋಟಿಸ್ಗೆ ಉತ್ತರಿಸದ ಎಇಇ ಗುರುವಾರ ಮತ್ತೆ ಸರ್ಕಾರಿ ವಾಹನದಲ್ಲಿ ಐಡಿಸಿ ಹೋಟೆಲ್ ಮತ್ತು ಶಾಪಿಂಗ್ ಮಾಲ್ ಎಂದು ರಾಯಚೂರಿನಲ್ಲಿ ಸುತ್ತಾಡುತ್ತಿರುವ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹೀರಾಲಾಲ ಅವರನ್ನು ಪ್ರಜಾವಾಣಿ ಸಂಪರ್ಕಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಶುಕ್ರವಾರ ಪ್ರಜಾವಾಣಿ ಜತೆ ಮಾತನಾಡಿದ ಎಇಇ ನಾಗೇಶ, ‘ಜು.2 ರಂದು ವಾಹನ ದುರ್ಬಳಕೆ ಬಗ್ಗೆ ನೀಡಿದ ನೋಟಿಸ್ಗೆ ಉತ್ತರಿಸಿಲ್ಲ. ಕೆಲಸದ ಅವಧಿ ಮುಗಿದ ನಂತರ ಗಾಡಿಯನ್ನು ಕಚೇರಿಯಲ್ಲೇ ಬಿಟ್ಟು ಹೋಗಬೇಕು ಎಂಬ ನಿಯಮ ಪಾಲಿಸುತ್ತಿಲ್ಲ. ಸಿಇಒ ಮತ್ತು ನಿರ್ದೇಶಕರಿಗೆ ಶಿಸ್ತು ಕ್ರಮಕ್ಕೆ ವರದಿ ನೀಡುವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.