ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರು ಘಟಕ ನಿರ್ವಹಣ ಗ್ರಾಪಂಗೆ ಹೊಣೆ

Last Updated 11 ಮೇ 2020, 14:31 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ವಿವಿಧೆಡೆ ಗ್ರಾಮಗಳಲ್ಲಿ ಸ್ಥಾಪಿಸಿದ ಶುದ್ಧ ನೀರಿನ ಘಟಕಗಳ ಪೈಕಿ ನೂರಕ್ಕೂಹೆಚ್ಚು ಸ್ಥಗಿತವಾಗಿ ವರ್ಷ ಕಳೆದರೂ, ನಿರ್ವಹಣೆ ಜವಾಬ್ದಾರಿ ಪಡೆದಿದ್ದ ಏಜೆನ್ಸಿಗಳು ದುರಸ್ತಿ ಮಾಡಲೇ ಇಲ್ಲ. ಜನರು ಅನುಭವಿಸುತ್ತಿರುವ ನೀರಿನ ತಾಪತ್ರಯ ತಪ್ಪಿಸಲು ಕೊನೆಗೂ ಮುಂದಾಗಿದ್ದು, ಘಟಕಗಳನ್ನೆಲ್ಲ ಸುಸಜ್ಜಿತ ಮಾಡಿಕೊಳ್ಳುವುದಕ್ಕೆ ಆಯಾ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ.

ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸುವ ಕರ ಮತ್ತು ನೀರು ಮಾರಾಟ ಶುಲ್ಕದಲ್ಲಿಯೇ ಘಟಕಗಳನ್ನು ನಿರ್ವಹಣೆ ಮಾಡಿಕೊಳ್ಳಲು ಅಗತ್ಯ ಮಾರ್ಗದರ್ಶಿ ನಿಯಮಗಳನ್ನು ಜಿಲ್ಲಾ ಪಂಚಾಯಿತಿ ಮೂಲಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಘಟಕಗಳನ್ನು ಸರಿಯಾಗಿ ಮುನ್ನಡೆಸಿಕೊಂಡು ಹೋದರೆ, ನಿರ್ವಹಣೆಯು ಹೊರೆ ಆಗುವುದಿಲ್ಲ. ವೆಚ್ಚವು ಸರಿದೂಗುತ್ತದೆ ಹಾಗೂ ಕ್ರಮೇಣ ಗ್ರಾಮ ಪಂಚಾಯಿತಿಗೆ ಆದಾಯದ ಮೂಲವಾಗಿ ಬದಲಾಗುತ್ತದೆ ಎನ್ನುವುದು ದೂರದೃಷ್ಟಿ.

ಶುದ್ಧ ನೀರಿನ ಘಟಕಗಳ ನಿರ್ವಹಣೆಯನ್ನು ಟೆಂಡರ್‌ ಮೂಲಕ ಪಡೆದುಕೊಂಡಿದ್ದ ಏಜೆನ್ಸಿಗಳ ಪೈಕಿ ಎರಡು ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ನಿರ್ವಹಣೆ ಕೈಬಿಟ್ಟಿರುವುದಕ್ಕೆ ದಂಡ ವಸೂಲಿಗೆ ಕ್ರಮ ಕೈಗೊಳ್ಳಲಾಗಿತ್ತು. ಯಾವುದಕ್ಕೂ ಏಜೆನ್ಸಿಯಿಂದ ಪ್ರತಿಕ್ರಿಯೆ ಬರಲೇ ಇಲ್ಲ. ಇದರಿಂದ ಕಾಲಹರಣ ಆಗುತ್ತಾ ಬಂದಿತ್ತು. ಏಜೆನ್ಸಿ ಮೂಲಕ ಶುದ್ಧ ನೀರು ಒದಗಿಸುವ ಯೋಜನೆಯ ಉದ್ದೇಶ ಸಂಪೂರ್ಣ ಆಗಲೇ ಇಲ್ಲ. ಕೆಲವು ಖಾಸಗಿ ಏಜೆನ್ಸಿಗಳು ಸಕ್ರಿಯವಾಗಿ ನಿರ್ವಹಣೆ ಮಾಡುತ್ತಿವೆ. ಆರಂಭದಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ, ನಿರ್ವಹಣೆ ಸಮಯ ಮುಕ್ತಾಯದ ಬಳಿಕವೇ ಘಟಕವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಬೇಕಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು 617 ಶುದ್ಧ ನೀರಿನ ಘಟಕಗಳಿವೆ. ಅವುಗಳಲ್ಲಿ 175 ಘಟಕಗಳು ಸ್ಥಗಿತವಾಗಿವೆ. ಮೇ ಅಂತ್ಯದೊಳಗಾಗಿ ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಘಟಕಗಳನ್ನು ದುರಸ್ತಿ ಮಾಡಿಕೊಂಡು, ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT