ದೂಳೂರೂನಿಂದ ಹಸಿರೂರತ್ತ ಸಿಂಧನೂರು

7
ಸಿಂಧನೂರು ನಾಗರಿಕರಲ್ಲಿ ಮೂಡುತ್ತಿರುವ ಪರಿಸರ ಜಾಗೃತಿ

ದೂಳೂರೂನಿಂದ ಹಸಿರೂರತ್ತ ಸಿಂಧನೂರು

Published:
Updated:
Deccan Herald

ಸಿಂಧನೂರು: 10 ವರ್ಷಗಳ ಹಿಂದೆ ದೂಳೂರು ಎಂದು ಅಪಖ್ಯಾತಿಗೆ ಗುರಿಯಾಗಿದ್ದ ಸಿಂಧನೂರಿನ ಜನರಲ್ಲಿ ಪರಿಸರ  ಜಾಗೃತಿ ಮೂಡಿದ್ದು, ಹಸಿರು ಕಾಣುತ್ತಿದೆ.

ಹೌದು. ಯಶೋಮಾರ್ಗದ ಅಮರೇಗೌಡ, ಅನ್ನದಾನೇಶ್ವರ ಆಸ್ಪತೆಯ ಡಾ.ಬಿಎನ್. ಪಾಟೀಲ, ಮರಿಬಸನಗೌಡ ವಕೀಲರ ಟ್ರಸ್ಟ್, ಬಸವಕೇಂದ್ರ, ಶ್ರಮಿಕ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಿಂಧನೂರನನ್ನು ಹಸಿರೂರು ಮಾಡಲು ಪಣ ತೊಟ್ಟಿವೆ.

ಇದಕ್ಕೆ ಮುನ್ನಡಿ ಎಂಬಂತೆ ಕೈ ಜೋಡಿಸಿರುವ ನಗರಸಭೆ ಮುಂಭಾಗ ಮತ್ತು ಕೋರ್ಟ್‌ ಹಿಂಭಾಗದಲ್ಲಿ ನಗರಸಭೆಯಿಂದ ಉದ್ಯಾನ ನಿರ್ಮಾಣಗೊಂಡಿವೆ. ಅದರೊಂದಿಗೆ ಸಹನಾ ಆಸ್ಪತ್ರೆಯಿಂದ ಆದರ್ಶ ಕಾಲೊನಿ ಸೇರಿದಂತೆ ಕೆಲ ಬಡಾವಣೆಗಳಲ್ಲಿ ರಸ್ತೆ ಬದಿಗಳಲ್ಲಿ ಗಿಡ ನೆಡಲಾಗಿದೆ.

ಗೆಳಯರ ಬಳಗ: ವೈದ್ಯರು, ಪತ್ರಕರ್ತರು, ಸಮಾಜ ಸೇವಕರು, ಶಿಕ್ಷಣ ಪ್ರೇಮಿಗಳು ಇರುವ ಸಮಾನ ಮನಸ್ಸಿನ ಯುವಕರ ತಂಡ ಪ್ರತಿ ಭಾನುವಾರ ವಿವಿಧ ವಾರ್ಡ್‌ಗಳಲ್ಲಿ ಹಸಿರು ಬೆಳೆಸುವ ಸಂಕಲ್ಪ ಮಾಡಿಕೊಂಡು ಕೆಲಸದಲ್ಲಿ ತೊಡಗಿದೆ.

ಒಂದು ಸಾವಿರ ಗಿಡಗಳನ್ನು ನೆಡುವ ಉದ್ದೇಶ ಹೊಂದಿರುವ ಈ ಬಳಗ ಈಗಾಗಲೇ ಐದು ಸಾವಿರ ಗಿಡಗಳನ್ನು ನೆಟ್ಟಿದ್ದು ಇನ್ನೂ ಐದು ಸಾವಿರ ಗಿಡಗಳನ್ನು ಹಾಕಿ ಒಂದು ವರ್ಷದ ವರೆಗೆ ಪೋಷಣೆ ಮಾಡುವ ಗುರಿ ಹೊಂದಿದೆ.

ರುದ್ರಗೌಡ ಆಸ್ಪತ್ರೆಯ ನೇತ್ರತಜ್ಞಾ ಡಾ.ಚನ್ನನಗೌಡ, ಸಹಾನ ಆಸ್ಪತ್ರೆಯ ರಾಜಶೇಖರ, ಆಕ್ಸಫರ್ಡ್ ಶಿಕ್ಷಣ ಸಂಸ್ಥೆಯ ಸತ್ಯನಾರಾಯಣಶೆಟ್ಟಿ, ದುದ್ದುಪುಡಿ ಶಿಕ್ಷಣ ಸಂಸ್ಥೆಯ ಆರ್.ಸಿ.ಪಾಟೀಲ, ಬಸವಕೇಂದ್ರದ ಶೇಖರ ಯರದಿಹಾಳ ಅವರು ಯುವಕರ ತಂಡ ಗಿಡನೆಡುವ ಕಾರ್ಯದಲ್ಲಿ ಬೆಂಬಲವಾಗಿ ನಿಂತಿದ್ದಾರೆ.

 ಸಿಎಸ್‍ಆರ್ ಫೌಂಡೇಷನ್ ಸಂಸ್ಥೆಯ ಮುಖ್ಯಸ್ಥ ಸಿ.ರಾಮ್ ಬಾಬು ಅವರು ನಗರದ ಗಾಂಧಿ ವೃತ್ತದಿಂದ ಗೋಪಾಲ ನಗರದ ವರೆಗೆ ಗಂಗಾವತಿ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಗಿಡಗಳನ್ನು ನೆಟ್ಟು ನಾಲ್ಕೈದು ವರ್ಷದಿಂದ ಜೋಪಾನ ಮಾಡುತ್ತಿದ್ದಾರೆ.

ಕಾಂಕ್ರೀಟ್ ರಸ್ತೆಯನ್ನು ಕೊರೆದು ಸಸಿ ನೆಟ್ಟು ಅವುಗಳಿಗೆ ರಿಂಗ್ ಅಳವಡಿಸಿ ತಂತಿಬೇಲಿ ಹಾಕುವ ಮೂಲಕ ಗಿಡಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ತೊಡಗಿರುವ ಪ್ರತಿ ಗಿಡಕ್ಕೆ ₹ 1000 ಖರ್ಚು ತಗುಲಿದ್ದು ಸಾವಿರಾರು ಗಿಡಗಳನ್ನು ಹಾಕಲಾಗಿದೆ. ಎಲ್ಲಾ ಖರ್ಚನ್ನು ಸಿಎಸ್‍ಆರ್ ಫೌಂಡೇಷನ್ ಸಂಸ್ಥೆಯೇ ಬರಿಸಿರುವುದು ವಿಶೇಷ.

ದೂಳೂರು ಎನ್ನುವ ಹೆಸರನ್ನು ಹೊಗಲಾಡಿಸಲು ತೊಡಗಿರುವ ಯುವಕರು ಮತ್ತು ಸಂಘಸಂಸ್ಥೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಸರಸ್ವತಿ ಪಾಟೀಲ ನಗರಸಭೆ ಉದ್ಯಾನಗಳನ್ನು ಅಭಿವೃದ್ಧಿಗೊಳಿಸುವ ಮತ್ತು ರಕ್ಷಿಸುವ ಕಡೆಗೆ ಗಮನಹರಿಸುವಂತೆ ಒತ್ತಾಯಿಸಿದ್ದಾರೆ.

ಯುವಕರು ಮತ್ತು ನಾಗರಿಕರು ಇದೇ ರೀತಿ ಕಾಳಜಿ ಇಟ್ಟುಕೊಂಡು ಪರಿಸರ ವೃದ್ಧಿಯಲ್ಲಿ ಕ್ರಿಯಾ ಶೀಲರಾದರೆ ಮುಂದಿನ ಐದು ವರ್ಷಗಳಲ್ಲಿ ಸಿಂಧನೂರು ಹಸಿರಿನಿಂದ ಕಂಗೊಳಿಸುವುದರಲ್ಲಿ ಸಂಶಯವಿಲ್ಲ
- ಡಾ.ಶಿವರಾಜ, ಮಕ್ಕಳ ತಜ್ಞ

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !