ನಿರಂತರ ಪರಿಶ್ರಮದಿಂದ ಸಾಧನೆ: ದತ್ತಾತ್ರೇಯ ಕಾರ್ನಾಡ್‌

ಭಾನುವಾರ, ಜೂಲೈ 21, 2019
28 °C

ನಿರಂತರ ಪರಿಶ್ರಮದಿಂದ ಸಾಧನೆ: ದತ್ತಾತ್ರೇಯ ಕಾರ್ನಾಡ್‌

Published:
Updated:
Prajavani

ರಾಯಚೂರು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವುದಕ್ಕೆ ನಿರಂತರ ಪರಿಶ್ರಮ ಪಡಬೇಕಾಗುತ್ತದೆ ಎಂದು ಯರಗೇರಾ ವೃತ್ತದ ಸಿಪಿಐ ದತ್ತಾತ್ರೇಯ ಕಾರ್ನಾಡ್‌ ಹೇಳಿದರು.

ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಿಜಯಪುರದ ಟ್ಯಾಲೆಂಟ್‌ ಕರಿಯರ್‌ ಅಕಾಡೆಮಿಯಿಂದ ಗುರುವಾರ ಆಯೋಜಿಸಿದ್ದ ಉಚಿತ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಬೇಕು. ಹಿಂದಿನ ಪ್ರಶ್ನೆಪತ್ರಿಕೆಗಳ ಮಾದರಿಯನ್ನು ಅನುಸರಿಸಬೇಕು. ಓದಿಗೆ ಹೆಚ್ಚು ಸಮಯ ಮೀಸಲಿಡಬೇಕು ಎಂದು ಕಿವಿಮಾತು ಹೇಳಿದರು.

ಅಕಾಡೆಮಿ ಅಧ್ಯಕ್ಷ ಅರ್ಜುನ, ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ಚಡಚಣ, ಸಂಜೀವ, ಗುರುಸ್ವಾಮಿ, ನಿತಿನ್‌, ಸಚಿನಕುಮಾರ್‌ ಕಟ್ಟಿಮನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !