ಗುರುವಾರ , ನವೆಂಬರ್ 21, 2019
26 °C

‘ಹಸಿರು ಯೋಗಿ’ ಕೃತಿ ಲೋಕಾರ್ಪಣೆ ನಾಳೆ

Published:
Updated:

ರಾಯಚೂರು: ನಗರದ ಪರಿಸರ ಪ್ರೇಮಿ ಈರಣ್ಣ ಕೋಸಗಿ ಅವರು ಮರಗಳನ್ನು ಬೆಳೆಸುವುದಕ್ಕೆ ವಹಿಸಿದ ಪರಿಶ್ರಮ ಕುರಿತು ಈರಣ್ಣ ಬೆಂಗಾಲಿ ಅವರು ಬರೆದ ‘ಹಸಿರು ಯೋಗಿ’ ಕೃತಿ ಲೋಕಾರ್ಪಣೆ ಸಮಾರಂಭವನ್ನು ಸೆಪ್ಟೆಂಬರ್‌ 8 ರಂದು ಬೆಳಿಗ್ಗೆ 11 ಗಂಟೆಗೆ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ನಿವೃತ್ತ ವಿಷಯ ಪರಿವೀಕ್ಷಕ ಮಲ್ಲಯ್ಯ ನಾಗೋಲಿ  ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕಿರಣ ಸಂಸ್ಥೆ ಹಾಗೂ ಭಾರತ ಜ್ಞಾನವಿಜ್ಞಾನ ಸಮಿತಿ, ಹಸಿರು ಬಳಗದ ವತಿದಿಂದ ಸಮಾರಮಭ ಆಯೋಜಿಸಲಾಗಿದೆ ಎಂದರು.

ನಗರಸಭೆ ಹಿರಿಯ ಸದಸ್ಯ ಜಯಣ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಕೃತಿ ಲೋಕಾರ್ಪಣೆ ಮಾಡುವರು. ನಿವೃತ್ತ ವಿಷಯ ಪರೀವೀಕ್ಷಕ ಮಲ್ಲಯ್ಯ ನಾಗೋಲಿ ಅಧ್ಯಕ್ಷತೆ ವಹಿಸುವರು.

ಪತ್ರಕರ್ತ ವಿಜಯ ಜಾಗಟಗಲ್ ಕೃತಿ ಕುರಿತು ಮಾತನಾಡುವರು. ಮುಖ್ಯ ಅತಿಥಿಗಳಾಗಿ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ನಟೇಶ, ಪತ್ರಕರ್ತರಾದ ಕೆ.ಸತ್ಯನಾರಾಯಣ, ದತ್ತು ಸರ್ಕಿಲ್, ಬಸವರಾಜ ನಾಗಡದಿನ್ನಿ ಹಾಗು ಕೃತಿಕರ್ತೃ ಈರಣ ಬೆಂಗಾಲಿ, ಹಸಿರು ಯೋಗಿ ಈರಣ್ಣ ಕೋಸಗಿ ಭಾಗವಹಿಸುವರು ಎಂದು ಹೇಳಿದರು.

ಹಸಿರು ಬಳಗದ ಸೈಯದ್ ಹಫೀಜುಲ್ಲಾ, ಈರಣ್ಣ ಬೆಂಗಾಲಿ, ಈರಣ್ಣ ಕೋಸಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)