ಹಟ್ಟಿಚಿನ್ನದಗಣಿ: ಹಟ್ಟಿ ಚಿನ್ನದಗಣಿ ಕಂಪನಿ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರವಾಗಿದೆ ಎಂದು ಗಣಿ ಕಂಪನಿಯ ಹಿರಿಯ ವ್ಯವಸ್ಧಾಪಕ(ಮಾಸ) ಯಮನೂರಪ್ಪ ಹೇಳಿದರು.
ಹಟ್ಟಿ ಪಟ್ಟಣದ ಗಣಿ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಣಿ ಕಂಪನಿಯ 77ನೇ ಸಂಸ್ಧಾಪನ ದಿನದ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು.
‘1947ರ ಜುಲೈ 8ರಂದು ಗಣಿ ಕಂಪನಿ ಸ್ಧಾಪನೆಯಾಗಿತ್ತು. ಪ್ರಥಮ ಬಾರಿಗೆ 77 ಕೆ.ಜಿ ಚಿನ್ನ ಉತ್ಪಾದಿಸಲಾಗುತ್ತಿತ್ತು. ಕಾಲ ಬದಲಾಗಿ ಯಂತ್ರಗಳು ಬಂದವು. ನಂತರದ ದಿನಗಳಲ್ಲಿ ಪರಿಸರ ವಿರುದ್ಧವಾಗಿ ಕಾರ್ಮಿಕರು ಕೆಲಸದ ಸಮಯದಲ್ಲಿ ಜೀವನವನ್ನೇ ಗಣಿ ಕಂಪನಿಗೆ ನೀಡಿದ್ದಾರೆ. ಅವರು ನೀಡಿದ ಕೊಡುಗೆ ಅಪಾರ’ ಎಂದು ಬಣ್ಣಿಸಿದರು.
ಉಪ ವ್ಯವಸ್ಧಾಪಕ ಟಿ.ರವಿಕುಮಾರ ಮಾತನಾಡಿ, ‘ಗಣಿ ಕಂಪನಿ ವತಿಯಿಂದ 75 ಸಾವಿರ ಸಸಿಗಳನ್ನು ನೆಡಲಾಗಿದೆ. ಮುಂದಿನ ದಿನಗಳಲ್ಲಿ 1 ಲಕ್ಷ ಸಸಿಗಳನ್ನು ಗಣಿ ಕಂಪನಿ ಸುತ್ತಲಿನ ಪ್ರದೇಶಗಳಲ್ಲಿ ನಾಟಿ ಮಾಡಲಾಗುವುದು’ ಎಂದರು.
ಸಿಬ್ಬಂದಿ ಹಾಗೂ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಶಫೀ, ಹನುಮಂತಪ್ಪ ನೀರಮಾನವಿ ಮಾತನಾಡಿದರು. ನಂತರ ಆಸ್ಪತ್ರೆಯ ರೋಗಿಗಳಿಗೆ ಹಾಲು–ಹಣ್ಣು ವಿತರಿಸಲಾಯಿತು. ಗಣಿ ಕಂಪನಿಯಲ್ಲಿ ಕೆಲಸದ ವೇಳೆ ಮೃತಪಟ್ಟ ಕಾರ್ಮಿಕರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿವಿಧ ಇಲಾಖೆಯ ಅಧಿಕಾರಿಗಳಾದ ಸೈಫ್–ಉಲ್–ಖಾನ್, ವಿಶ್ವನಾಥ ನಾಯಕ, ರವೀಂದ್ರ ಮಾವಿನಕಟ್ಟಿ, ಸುರೇಶ, ಸಂತೋಷ ನಾಯಕ, ಸಾಜೀದಾ ಬೇಗಂ, ಮುಖಂಡರಾದ, ಚಂದ್ರಶೇಖರ ಹಟ್ಟಿ, ವೆಂಕೋಬ ಮಿಯ್ಯಾಪುರ, ಕನಕರಾಜಗೌಡ, ಸೋಮಣ್ಣ ನಾಯಕ, ಸಿಬ್ಬಂದಿ ರಂಗನಾಥ ಮೈಬು, ಕುಟಿಮಾ ಸೇರಿದಂತೆ ಅನೇಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.