ಹಟ್ಟಿ ಚಿನ್ನದ ಗಣಿ: ಕೆಲವೊಂದು ವರ್ಗಕ್ಕೆ ಉಪಕಸುಬುಗಳೇ ಆಧಾರವಾಗಿವೆ. ಬೇಸಿಗೆ ಬಂದರೆ ಸಾಕು ಪಟ್ಟಣದ ಬಡ ಕುಟುಂಬಗಳಿಗೆ ಹಳ್ಳ, ಕೊಳ್ಳ, ನದಿ ದಂಡೆಗಳಲ್ಲಿ ಸ್ವಾಭಾವಿಕವಾಗಿ ಬೆಳೆದು ನಿಂತಿರುವ ಈಚಲು ಗರಿಗಳೇ ಆಧಾರವಾಗಿವೆ.

ಈಚಲುಗರಿಗಳನ್ನು ಕಿತ್ತು ತಂದು ಬಿಸಿಲಿನಲ್ಲಿ ಒಣಗಿಸಿ ಮನೆ ಸ್ವಚ್ಛಗೊಳಿಸುವ ಪೊರಕೆ ತಯಾರಿಸುತ್ತಾರೆ. ಸಾಂಪ್ರದಾಯಿಕ ಉದ್ಯೋಗ ಆಧರಿಸಿ ಬದುಕುತ್ತಿರುವ ಅನೇಕರಿಗೆ ಪೊರಕೆ ತಯಾರಿಕೆ ಜೀವನ ನಿರ್ವಹಣೆ ಉಪಕಸುಬಾಗಿದೆ.

ಗುರುಗುಂಟಾ ಹೋಬಳಿಯ ಮಾಚನೂರು ಕೆರೆ, ಪೈದೊಡ್ಡಿ, ಯರಜಂತಿ, ವಂದಲಿ ಹೊಸೂರು ಗೋಲಪಲ್ಲಿ, ಹಳ್ಳ ಕೆರೆ, ದಂಡೆಯಲಿ ಸೇರಿದಂತೆ ಹೊಲದ ಬದುಗಳಲ್ಲಿ ಬೆಳೆದ ಈಚಲು ಗಿಡಗಳನ್ನು ಕತ್ತರಿಸಿ ತರುವ ಕೊರವರು ಒಂದುವಾರ ಬಿಸಿಲಿನಲ್ಲಿ ಒಣಗಿಸುತ್ತಾರೆ. ಕಟ್ಟಿಗೆಯಿಂದ ಸವರಿ ಮುಳ್ಳುಗಳನ್ನು ಉದುರಿಸುತ್ತಾರೆ. ಸೂಡು ಕಟ್ಟಿ ಹಾಗೆ ರಕ್ಷಿಸುತ್ತಾರೆ.

ನಂತರ ಕಡ್ಡಿಗಳನ್ನು ಬೇರ್ಪಡಿಸಿ ನೀರಿನಲ್ಲಿ ನೆನೆಸುತ್ತಾರೆ. ಅಂಕುಡೊಂಕಾದ ಕಡ್ಡಿಗಳನ್ನು ನೇರ ಮಾಡಲು ಸಮತಟ್ಟಾದ ಜಾಗದಲ್ಲಿ ಇರಿಸಿ ಅದರ ಮೇಲೆ ಭಾರದ ವಸ್ತುಗಳನ್ನು ಇಡುತ್ತಾರೆ. ಆಗಾಗ ಅಲ್ಪ ಪ್ರಮಾಣದಲ್ಲಿ ನೀರು ಹಾಕುತ್ತಾರೆ. 50 ರಿಂದ 60 ದಿನಗಳ ನಂತರ ಗರಿಗಳನ್ನು ಬಳಸಿ ಕಸಬರಿಗೆ ಕಟ್ಟುತ್ತಾರೆ. ಈಚಲು ಕಡ್ಡಿ ಬಳಸಿ ಬುಟ್ಟಿಯನ್ನೂ ಹೆಣೆಯುತ್ತಾರೆ.

‘ಇಷ್ಟೇಲ್ಲಾ ಶ್ರಮದ ಬೆವರು ಬಸಿದು ತಯಾರಿಸಿದ ಕಸಬರಿಗೆ, ಬುಟ್ಟಿ, ಇತರೆ ವಸ್ತುಗಳ ಮಾರಾಟ ಮಾಡುವುದು ಸವಾಲಿನ ಕೆಲಸವಾಗಿದೆ. ಊರೂರಿಗೆ ಕಸಬರಿಗೆ ಹೊತ್ತು ಮಾರಾಟ ಮಾಡಲು ಹೊಗುತ್ತೇವೆ. ಪೊರಕೆ, ಬುಟ್ಟಿಗಳನ್ನು ಹೇಳಿದ ಬೆಲೆಗೆ ಯಾರೂ ಖರೀದಿಸುವುದಿಲ್ಲ. ಕಡ್ಡಿ ಕಸಬರಗಿ ₹40, ಸಾಮಾನ್ಯ ಕಸಬರಗಿಗೆ ₹20 ಒಂದರಂತೆ ಮಾರಾಟ ಮಾಡುತ್ತೇವೆ’ ಎಂದು ಪಟ್ಟಣದ ನೀರುಪಾದಿ ಕೊರವರ ಹೇಳಿದರು.

ಕೊರವರು ಈಚಲು ಗಿಡದ ಕಡ್ಡಿಯಿಂದ ಬುಟ್ಟಿ, ತಟ್ಟಿ, ಒಡ್ಡು ಹೆಡಿಗೆ, ಮಡ್ಡಿನ ಪುಟ್ಟಿ, ಜಲ್ಲಿ, ಕೈಜಲ್ಲಿ, ನೆಲುವು, ಸಿಂಬೆ, ಚಾಪೆ, ಹಸಮಾಡುವ ಮರ, ಗರಿಯಿಂದ ಕಸಬರಗಿ, ಹುಲ್ಲು ಕಸಬರಗಿ, ಕಡ್ಡಿ ಕಸಬರಗಿ ಮೊದಲಾದವುಗಳನ್ನು ಸಿದ್ಧಪಡಿಸುತ್ತಾರೆ. ಬೇಸಿಗೆಯಲ್ಲಿ ಈಚಲು ಗಿಡ ಉದ್ಯೋಗ ನೀಡುವ ಮೂಲಕ ಕೈ ಹಿಡಿದಿದೆ ಎನ್ನುತ್ತಾರೆ ಕೊರವರು.

ಇಂದಿನ ಆಧುನಿಕ ಪ್ಲಾಸ್ಟಿಕ್ ಯುಗದಲ್ಲಿ ಹಳೆ ಕಾಲದ ಪೊರಕೆಗಳನ್ನು ಕೊಂಡುಕೊಳ್ಳುವ ಜನ ಬಹಳ ಕಡಿಮೆ. ಕಷ್ಟಪಟ್ಟು ದುಡಿದರೆ ಅಲ್ಪಸ್ವಲ ಕಾಸು ಸಿಗುತ್ತದೆ, ಇದರಿಂದ ಜೀವನ ನಡೆಸುತ್ತಿದ್ದೇವೆ
-ಶರಣಪ್ಪ ಕೊರವ, ಕೊಠಾ ಗ್ರಾಮದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.