ಹಟ್ಟಿ ಚಿನ್ನದ ಗಣಿ: 2018–19ನೇ ಸಾಲಿನಲ್ಲಿ 1,661 ಕೆಜಿ ಚಿನ್ನ ಉತ್ಪಾದನೆ

ಶುಕ್ರವಾರ, ಏಪ್ರಿಲ್ 26, 2019
35 °C

ಹಟ್ಟಿ ಚಿನ್ನದ ಗಣಿ: 2018–19ನೇ ಸಾಲಿನಲ್ಲಿ 1,661 ಕೆಜಿ ಚಿನ್ನ ಉತ್ಪಾದನೆ

Published:
Updated:
Prajavani

ಹಟ್ಟಿ ಚಿನ್ನದ ಗಣಿ (ರಾಯಚೂರು): ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಕಂಪೆನಿಯು 2018–19ನೇ ಸಾಲಿನಲ್ಲಿ 1,661 ಕೆಜಿ ಚಿನ್ನವನ್ನು ಉತ್ಪಾದಿಸಿದ್ದು, ನಿಗದಿತ ಗುರಿಯಲ್ಲಿ ಶೇ 98 ರಷ್ಟು ಸಾಧನೆ ಮಾಡಿದೆ ಎಂದು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಪ್ರಭಾಕರ ಸಂಗೂರಮಠ ತಿಳಿಸಿದ್ದಾರೆ.

6 ಲಕ್ಷ ಟನ್‌ ಅದಿರು ಹೊರತೆಗೆಯುವ ಗುರಿಯಲ್ಲಿ 5.87 ಲಕ್ಷ ಟನ್‌ ಅದಿರು ಹೊರತೆಗೆಯಲಾಗಿದೆ. ಪ್ರತಿ ಟನ್‌ ಅದಿರಿನಲ್ಲಿ 2.83 ಗ್ರೇಡ್‌ ಚಿನ್ನವನ್ನು ಉತ್ಪಾದಿಸುವ ಗುರಿಯನ್ನು ನೂರಕ್ಕೆ ನೂರರಷ್ಟು ಸಾಧನೆ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 1,640 ಕೆಜಿ ಚಿನ್ನ ಉತ್ಪಾದನೆ ಮಾಡಲಾಗಿತ್ತು. ಈ ವರ್ಷ 21 ಕೆಜಿ ಅಧಿಕ ಚಿನ್ನ ಉತ್ಪಾದನೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !