ಹಟ್ಟಿ ಚಿನ್ನದ ಗಣಿ: ‘ಸ್ಧಳೀಯ ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಬೇಡಿಕೆಗಳು ಈಡೇರುವವರೆಗೂ ನಮ್ಮ ಹೋರಾಟ ನಿಲ್ಲದು’ ಎಂದು ಕಾರ್ಮಿಕ ಮುಖಂಡ ಯಂಕೋಬ ಮಿಯ್ಯಾಪೂರ ಹೇಳಿದರು.

ಹಟ್ಟಿ ಚಿನ್ನದ ಗಣಿ ಕಂಪನಿ ಮುಖ್ಯದ್ವಾರದ ಮುಂದೆ ಸಿಬ್ಬಂದಿ ಹಾಗೂ ಕಾರ್ಮಿಕ ಹಾಗೂ ಸಿಐಟಿಯು ನೇತೃತ್ವದಲ್ಲಿ ಹಮ್ಮಿಕೊಂಡ 2ನೇ ಹಂತದ ಪ್ರತಿಭಟನೆ ವೇಳೆ ಕಾರ್ಮಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಹೊಸ ವೇತನ ಒಪ್ಪಂದ ಮೆಡಿಕಲ್ ಅನ್ಪೀಟ್ , ಕಾರ್ಮಿಕರ ಹಳೆ ಬೋನಸ್, ಇವುಗಳನ್ನು ಕಾರ್ಮಿಕರಿಗೆ ಒದಗಿಸದೆ ಆಡಳಿತ ಮಂಡಳಿ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ’ ಎಂದು ಆರೋಪ ಮಾಡಿದರು.

ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಹಾಗೂ ಕಪ್ಪು ಬಾವುಟಗಳನ್ನು ಹಿಡಿದು ಘೋಷಣೆ ಕೂಗಿದರು.

ವೇತನ ಪರಿಷ್ಕರಣೆ ಮಾತುಕತೆಗಳನ್ನು ಕೂಡಲೇ ಆರಂಭಿಸಬೇಕು. ಬಾಕಿ ಎಚ್.ಆರ್.ಎ. ಹಾಗೂ ಬೋನಸ್ ಸೇರಿದಂತೆ ವಿವಿಧ ಬಾಕಿ ಇತರೆ ಸೌಲಭ್ಯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಕಾರ್ಯದರ್ಶಿಗಳಾದ ವೆಂಕೋಬ್ ಗೌಸ್ ಮಿಯಾ, ರಮೇಶ ಬಾಬು, ನಾಗರಾಜ್, ಹನೀಫ್, ಸಿದ್ದಪ್ಪ ಮುಂಡರಗಿ, ಚಂದ್ರಶೇಖರ್ ನೆಲೋಗಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಬು ಸಾಗರ್, ರಮೇಶ ವೀರಾಪೂರ, ಮೌನುದ್ದೀನ್ ಇತರರು ಉಪಸ್ಧಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-32-1208011129

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.