ಹಟ್ಟಿ ಚಿನ್ನದ ಗಣಿ: ‘ಆನ್ವರಿ ಗ್ರಾಮದ ಮುಸ್ಲಿಮರು ಧರ್ಮ ಬದಿಗಿಟ್ಟು ಎಲ್ಲರೊಡನೆ ಸೌಹಾರ್ದದಿಂದ ಬದುಕುತ್ತಿದ್ದು, ಮುಂದೆಯೂ ಹೀಗೆ ಬದುಕಿ ಗ್ರಾಮಕ್ಕೆ ಕಪ್ಪುಚುಕ್ಕೆ ಬಾರದಂತೆ ನಡೆದುಕೊಳ್ಳಬೇಕು’ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ ಹೇಳಿದರು.

ರಂಜಾನ್ ಪ್ರಯುಕ್ತ ಆನ್ವರಿ ಗ್ರಾಮದ ಮಸೀದಿಯಲ್ಲಿ ಮುಸ್ಲಿಮರು ಏರ್ಪಡಿಸಿದ್ದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಹೊರ ಪ್ರಪಂಚದಲ್ಲಿ ಏನೇ ನಡೆಯಲಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಹಿಂದೂಗಳೊಂದಿಗೆ ಪರಸ್ಪರ ಪ್ರೀತಿ, ವಿಶ್ವಾಸ-ಸಹೋದರತ್ವದೊಂದಿಗೆ ಬಾಳಬೇಕು’ ಎಂದರು.

‘ಧರ್ಮದ ಸಾರ ತಿಳಿದುಕೊಂಡು ಅದರಂತೆ ಒಳ್ಳೆಯವರಾಗಿ ಜೀವನ ನಡೆಸಬೇಕು. ಮತ್ತೊಬ್ಬರ ಧರ್ಮ–ಜಾತಿಗಳ ಆಚರಣೆಗೆ ಅಡ್ಡಿಯಾಗದೆ, ನೀವೂ ಪಾಲ್ಗೊಂಡು ಸಹಬಾಳ್ವೆಯೊಂದಿಗೆ ಬದುಕಿ ತಾಲ್ಲೂಕಿಗೆ ಆದರ್ಶ ಗ್ರಾಮ ಎಂದು ತೋರಿಸಿ’ ಎಂದು ಹೇಳಿದರು.

‘ಶಾದಿ ಮಹಲ್ಗೆ ₹20 ಲಕ್ಷ, ಮಸೀದಿ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ಒದಗಿಸಲಾಗಿದೆ. ಮುಂದೆ ಸಹ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುವೆ’ ಎಂದು ಭರವಸೆ ನೀಡಿದರು. ತಾ.ಪಂ ಮಾಜಿ ಅಧ್ಯಕ್ಷ ಎಚ್.ಬಿ.ಮುರಾರಿ, ಮಾಜಿ ಸದಸ್ಯ ಶಿವರಣಪ್ಪಗೌಡ (ಬಾಬಣ್ಣ), ಆನ್ವರಿ ಅಂಜುಮನ್ ಕಮಿಟಿ ಅಧ್ಯಕ್ಷ ಮಕ್ಬೂಲ್ಸಾಬ, ಶೇಷಣ್ಣ ಪಾಟೀಲ, ಮಹಿಬೂಬ ಸಾಬ್, ಹುಸೇನ್ಸಾಬ್, ಧರೆಸಾಬ್ ಚೌಧರಿ, ಜಿಲಾನಿ ಪಾಷಾ ಹಾಗೂ ಖಾಸಿಂಸಾಬ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-32-76843206

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.