ಹಟ್ಟಿ ಚಿನ್ನದ ಗಣಿ: ಚಿನ್ನದ ಗಣಿ ಕಂಪನಿ ಕಾರ್ಮಿಕರ ಮನೆಗಳಿಗೆ ಕಾರ್ಮಿಕರು ಕಲುಷಿತ ನೀರು ಪೂರೈಕೆಯಾಗುತ್ತಿದೆ. ಕಾರ್ಮಿಕರು, ಕುಟುಂಬಸ್ಥರಿಗೆ ರೋಗ ಹರಡುವ ಭೀತಿ ಕಾಡುತ್ತಿದೆ.

ಕಾರ್ಮಿಕರ ಕಾಲೊನಿ ನಿವಾಸಿಗಳಿಗೆ ಟಣಮಕಲ್ಲು ಹತ್ತಿರದ ಕೃಷ್ಣಾ ನದಿಯಿಂದ ನೀರು ಪೂರೈಸಲಾಗುತ್ತದೆ. ಆದರೆ ಈ ನೀರು ದುರ್ವಾಸನೆ ಬೀರುತ್ತಿದ್ದು ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ವಾಂತಿ–ಭೇದಿ, ನೆಗಡಿ, ಚಕೆಮ್ಮು, ಜ್ವರ ಬಂದು ಮಕ್ಕಳ, ಹಿರಿಯ ನಾಗರಿಕರನ್ನು ಆಸ್ಪತ್ರೆಗೆ ಹೋಗಬೇಕಾದ ಸ್ಧಿತಿ ಎದುರಾಗಿದೆ.

ಅಧಿಕಾರಿಗಳಿಗೆ ಕಾರ್ಮಿಕರ ತೊಂದರೆ ಕಾಣುತ್ತಿಲ್ಲ. ನಮ್ಮ ಸಮಸ್ಯೆಯನ್ನು ಆಲಿಸುವವರೇ ಇಲ್ಲದಂತಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

‘ಸಂಬಂದಪಟ್ಟ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಮೇಲಧಿಕಾರಿಗಳು ಇತ್ತ ಗಮನಹರಿಸಿ ಕಾರ್ಮಿಕರ ಸಮಸ್ಯೆ ಬಗೆಹರಿಸಿ’ ಎಂದು ಸಿಐಟಿಯು ಸಂಘಟನೆ ಮುಖಂಡ ಹನೀಪ್ ಆಗ್ರಹಿಸಿದ್ದಾರೆ.

ಅಧಿಕಾರಿಗಳು ಹಣಕೊಟ್ಟು ಶುದ್ಧ ನೀರು ತರಿಸಿಕೊಂಡು ಕುಡಿಯುತ್ತಾರೆ. ಬಡ ಕಾರ್ಮಿಕರು, ಮಕ್ಕಳು, ನದಿಯ ನೀರನ್ನೆ ಕುಡಿಯಬೇಕು. ಈ ನೀರು ಬಿಟ್ಟರೆ ಅರ್ಸೆನಿಕ್ ಅಂಶ ಇರುವ ಬೋರ್ವೆಲ್ ನೀರೇ ಗತಿ’ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ ಟಣಮಕಲ್ಲು ಹತ್ತಿರ ವಿದ್ಯುತ್ ಸಮಸ್ಯೆ ಎದುರಾಗಿದ್ದರಿಂದ ನೀರಿನ ತೊಂದರೆ ಎದುರಾಗಿತ್ತು. ದುರಸ್ತಿ ಮಾಡಲಾಗಿದೆ, ಶುದ್ಧ ನೀರು ಪೂರೈಕೆ ಮಾಡಲು ಗಣಿ ಕಂಪನಿ ಸಿದ್ಧವಿದೆ ಎಂದು ಗಣಿ ಕಂಪನಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಗಣಿ ಕಂಪನಿ ಟಣಮಕಲ್ಲು ಹತ್ತಿರ ಇರುವ ಶುದ್ಧ ನೀರಿನ ಘಟಕದಿಂದ ನೀರು ಪೂರೈಕೆ ಮಾಡಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಹೋರಾಟ ಹಮ್ಮಿಕೊಳ್ಳಲಾಗುವುದು
ಮೌನೇಶ ಕಾಕಾನಗರ, ಕರವೇ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.