ಹಟ್ಟಿಚಿನ್ನದ ಗಣಿ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು ಯುವಜನರೆನ್ನದೆ ಎಲ್ಲ ವಯಸ್ಸಿನವರು ಬಣ್ಣದ ಓಕುಳಿಯಲ್ಲಿ ಮಿಂದೆದ್ದರು.

ಎತ್ತ ನೋಡಿದರೂ ಬಣ್ಣದಾಟದ ಸಡಗರ, ಕೆಂಪು, ಹಳದಿ ಕೇಸರಿ, ನೀಲಿ, ನಾನಾ ಬಣ್ಣಗಳನ್ನು ಬಳಿದು, ಇತರರಿಗೂ ಉತ್ಸಾಹದಿಂದ ಎರಚಲು ಮುಂದಾದ ಯುವಕರ ಗುಂಪು, ಯುವಕರ ಅತ್ಯುತ್ಸಾಹದ ಬಣ್ಣದಾಟ ಕುಣಿದಾಟ ಬೈಕ್ ಮೇಲೆ ಯುವಕರ ಹರ್ಷೋದ್ಗಾರ, ಬಣ್ಣದಾಟಕ್ಕೆ ಸಂಬಂದಿಸಿದ ಚಲನಚಿತ್ರ ಹಾಡುಗಳಿಗೆ ಉತ್ಸಾಹ ದಿಂದ ಹೆಜ್ಜೆಹಾಕಿದರು. ಗುರುಗುಂಟಾ, ಆನ್ವರಿ, ಕೋಠಾ, ನಿಲೋಗಲ್, ಯಲಗಟ್ಟಾ, ಮಾಚನೂರು, ಪೈದೊಡ್ಡಿ, ಬಂಡೆಭಾವಿ, ವಿವಿಧ ಗ್ರಾಮಗಳ ಯುವಕರು ಸಂಭ್ರಮದ ಬಣ್ಣ ಎರಚಿ ಕುಣಿದರು.

ಯುವಕರು ರಸ್ತೆ ಬೀದಿಯಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ಖುಷಿಪಟ್ಟರು. ಮನೆಗಳಲ್ಲಿ ಮಹಿಳೆಯರು ಹೋಳಿ ಆಚರಿಸಿ ನಂತರ ಸಿಹಿ ಹಂಚಿ ಸವಿದರು. ಯುವಜನರು ಮಕ್ಕಳು ಮಹಿಳೆಯರು ಬಣ್ಣದಾಟದಲ್ಲಿ ಮುಳುಗಿದ್ದರು. ಪುಟಾಣಿ ಮಕ್ಕಳು ಪಿಚಕಾರಿಯಿಂದ ದೊಡ್ಡವರಿಗೆ ಬಣ್ಣ ಎರಚಿ ಸಂಭ್ರಮಿಸಿದರು. ಹೋಳಿ ಹಬ್ಬದ ದಿನ ಸಂಜೆ ಕೃಷ್ಣ ನದಿಯಲ್ಲಿ ಸ್ನಾನ ಮಾಡಿದ ಯವಕರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

ಯುಗಾದಿ: ಮಂತ್ರಾಲಯದಲ್ಲಿ ವಿಶೇಷ ಪೂಜೆ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯುಗಾದಿ ಪ್ರಯುಕ್ತ ಗುರುವಾರ ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಯಿತು.

ಮೂಲ ರಾಮದೇವರಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತೈಲ ಅಭ್ಯಂಗನ ನೆರವೇರಿಸಿದರು. ಇದೇ ವೇಳೆ ತುಳಸಿ ಪೂಜೆ, ಗೋ ಪೂಜೆ ಮಾಡಿದರು.

ಮಠದಲ್ಲಿ ಪ್ರಾಣದೇವರು, ರಾಯರು ಮತ್ತು ಇತರ ಬೃಂದಾವನಗಳಿಗೂ ತೈಲ ಅಭ್ಯಂಗನ ಮತ್ತು ಆರತಿಯನ್ನು ಅರ್ಪಿಸಲಾಯಿತು. ನಂತರ ಸ್ವಾಮೀಜಿ ಭಕ್ತರಿಗೆ ಹೊಸ ವರ್ಷದ ಅನುಗ್ರಹ ಸಂದೇಶ ನೀಡಿ ಆಶೀರ್ವದಿಸಿದರು.

ಯುಗಾದಿ ಸಂಭ್ರಮಕ್ಕೆ ಬಣ್ಣದ ಓಕುಳಿ ಮೆರಗು

ಮಸ್ಕಿ: ‘ಹೊಸ ವರ್ಷ ಯುಗಾದಿ ಹಬ್ಬವನ್ನು ಪಟ್ಟಣದ ವಿವಿಧೆಡೆ ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಯುವಕರು, ಮಹಿಳೆಯರು ಸೇರಿ ಬಣ್ಣದ ಓಕುಳಿಯಲ್ಲಿ ಭಾಗವಹಿಸಿ, ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

ಪಟ್ಟಣದ ಬಸವೇಶ್ವರ ನಗರ, ಮುಖ್ಯ ಬಜಾರ, ಹಳೆ ಬಸ್ ನಿಲ್ದಾಣ, ಸಂತೆ ಬಜಾರ, ಅಶೋಕ ವೃತ್ತ, ಗಾಂಧಿ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೂರಾರು ಯುವಕರು ಗುಂಪುಗಳಾಗಿ ಸೇರಿ ಯುಗಾದಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಬಣ್ಣಗಳ ಹಬ್ಬದಂತೆಯೇ ಕಂಗೊಳಿಸಿದ ಸಂಭ್ರಮದಲ್ಲಿ ಎಲ್ಲೆಡೆ ಹರ್ಷೋದ್ಗಾರಗಳು ಮೊಳಗಿದವು.

ಹ್ಯಾಪಿಕಿಡ್ಸ್ ಶಾಲೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಣ್ಣದ ಓಕುಳಿಯನ್ನು ಸಂಭ್ರಮದಿಂದ ಆಚರಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹೊಸ ವರ್ಷದ ಶುಭಾರಂಭಿಸಿದರು.

ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಸಿಪಿಐ ರಾಮಪ್ಪ ಜಲೆಗಾರ ಹಾಗೂ ಪಿಎಸ್ಐ ಕೆ. ರಂಗಯ್ಯ ಅವರ ನೇತೃತ್ವದಲ್ಲಿ ಪಟ್ಟಣದ ವಿವಿಧ ಭಾಗಗಳಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿದ್ದು, ಶಾಂತಿಯುತವಾಗಿ ಹಬ್ಬ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.