ಹಟ್ಟಿ ಚಿನ್ನದ ಗಣಿ: ಇಲ್ಲಿನ ಗಣಿ ಕಂಪನಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಗೂ ಹೊರಗುತ್ತಿಗೆ ಕಾರ್ಮಿಕರ ಮಧ್ಯೆ ಮಂಗಳವಾರ ವಾಗ್ವಾದ ನಡೆಯಿತು.

ಸಂಘದ ಪದಾಧಿಕಾರಿಗಳು ಹೊರಗುತ್ತಿಗೆ ನೌಕರರನ್ನು ಕೆಲಸಕ್ಕೆ ತೆರಳಲು ಬಿಡದ ಕಾರಣ ಕೆಲ ಸಮಯ ಗೊಂದಲ ಉಂಟಾಯಿತು.

ಕಾರ್ಮಿಕ ಮುಖಂಡರಾದ ಯಂಕೋಬ ಮಿಯ್ಯಾಪೂರ, ರಮೇಶ ವೀರಾಪೂರ ಅವರು ಬಂದು ಕಾರ್ಮಿಕರ ಬಹು ದಿನಗಳ ಬೇಡಿಕೆಯಾದ ಅನ್ಫಿಟ್ ಯೋಜನೆ ಜಾರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗಣಿ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಬೆಂಬಲ ಸೂಚಿಸಿ ಎಂದು ಹೊರಗುತ್ತಿಗೆ ಕಾರ್ಮಿಕರಿಗೆ ತಿಳಿಸಿದರು.

ಇದಕ್ಕೆ ಒಪ್ಪಂದ ಕೆಲ ಹೊರಗುತ್ತಿಗೆ ಕಾರ್ಮಿಕರು,‘ನಮ್ಮ ಜೀವನಕ್ಕೆ ಕೆಲಸವೇ ಆಧಾರವಾಗಿದೆ. ಕೆಲಸಕ್ಕೆ ಹೋಗದಿದ್ದರೆ ಕುಟುಂಬ ಬೀದಿಗೆ ಬರಲಿದೆ. ನಮ್ಮ ಸಮಸ್ಯೆಯನ್ನು ಆಲಿಸಿ’ ಎಂದು ಪಟ್ಟು ಹಿಡಿದರು.

ಕಾರ್ಮಿಕ ಮುಖಂಡ ಮೌನುದ್ದಿನ್ ಮಾತನಾಡಿ,‘ನಿಮ್ಮ ಸಮಸ್ಯೆಗಳನ್ನು ಆಡಳಿತ ಮಂಡಳಿಯ ಗಮನಕ್ಕೆ ತರಲಾಗುವುದು. ಕಾರ್ಮಿಕರು ಸಹಕಾರ ಅವಶ್ಯಕ’ ಎಂದು ಹೇಳಿದರು.

ಆಗ ಹೊರಗುತ್ತಿಗೆ ಕಾರ್ಮಿಕರು ಕೆಲಸಕ್ಕೆ ತೆರಳದೆ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-32-231423987

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.