ಹಟ್ಟಿ ಚಿನ್ನದ ಗಣಿ: ‘ದೇಶದಲ್ಲಿ ದುಡಿಯುವ ವರ್ಗಗಳ ಪರವಾಗಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಸಿಐಟಿಯು ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉಮೇಶ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಪೈ ಭವನದಲ್ಲಿ ಸಿಐಟಿಯು ಸಂಘಟನೆ ಹಾಗೂ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಮೇ 1, ಕಾರ್ಮಿಕರ ಹೋರಾಟದ ಇತಿಹಾಸವನ್ನು ಸ್ಮರಿಸುವ ದಿನ ಮಾತ್ರವಲ್ಲ, ಇಂದಿನ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಸಂಕಲ್ಪದ ದಿನವೂ ಆಗಿದೆ’ ಎಂದು ಅವರು ಹೇಳಿದರು.

‘ಹಟ್ಟಿ ಚಿನ್ನದ ಗಣಿಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದೆ. ಖಾಸಗೀಕರಣ, ಕಾರ್ಮಿಕ ವಿರೋಧಿ ನೀತಿಗಳು, ಗುತ್ತಿಗೆ ಪದ್ಧತಿ, ವೇತನ ಅಸಮಾನತೆ ಸೇರಿ ಇತರ ಸಮಸ್ಯೆಗಳು ಹೆಚ್ಚುತ್ತಿವೆ’ ಎಂದರು. ‘ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ 4 ಲೇಬರ್ ಕೋಡ್ಗಳು ಕಾರ್ಮಿಕರ ಹಕ್ಕುಗಳಿಗೆ ದೊಡ್ಡ ಹೊಡೆತವಾಗಿದೆ. ಹಲವು ವರ್ಷಗಳ ಹೋರಾಟದಿಂದ ಕಾರ್ಮಿಕರು ಪಡೆದಿದ್ದ ಕಾನೂನುಬದ್ಧ ಹಕ್ಕುಗಳನ್ನು ಒಂದೇ ಸಾರಿ ಕಡಿತಗೊಳಿಸುವ ಪ್ರಯತ್ನವೇ ಈ ಲೇಬರ್ ಕೋಡ್ಗಳು’ ಎಂದು ಹೇಳಿದರು.

ಕಾರ್ಮಿಕ ಮುಖಂಡ ಮೌನುದ್ದೀನ್ ಮಾತನಾಡಿ,‘ಕಾರ್ಮಿಕರಲ್ಲಿ ಸಂಘ ಟನೆಯ ಕೊರತೆ ಇದೆ. ಇದನ್ನು ಸರಿಪಡಿಸುವ ಹೊಣೆಗಾರಿಕೆ ಸಂಘದ ಮೇಲಿದೆ’ ಎಂದರು.

ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶಫಿ ಮಾತನಾಡಿ,‘ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಬಾಕಿ ಬೇಡಿಕೆಗಳ ಈಡೇರಿಕೆಗೆ ನಮ್ಮ ಸಂಘ ಹಗಲಿರುಳು ಶ್ರಮಿಸುತ್ತಿದೆ. ಹಂತ ಹಂತವಾಗಿ ಬೇಡಿಕೆಗಳು ಈಡೇರಲಿವೆ. ಕಾರ್ಮಿಕರು ಸಹಕಾರ ನೀಡಬೇಕು’ ಎಂದು ಹೇಳಿದರು.

ಶಾಂತಪ್ಪ ಆನ್ವರಿ ಹಾಗೂ ವರಲಕ್ಷ್ಮಿ ಮಾತನಾಡಿದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಿರಿಯಪ್ಪ ಪೂಜಾರ್, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ರಮೇಶ ವೀರಾಪೂರು, ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಮೈನುದ್ದೀನ್, ಕಾರ್ಮಿಕ ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ಆನ್ವರಿ, ಕಾರ್ಯದರ್ಶಿಗಳಾದ ವೆಂಕೋಬ್ ಮಿಯ್ಯಾಪೂರು, ಗೌಸ್ ಮಿಯಾ, ಜಮದಗ್ನಿ, ರಮೇಶಬಾಬು, ಹನೀಫ್, ನಾಗರಾಜ್.ಡಿ, ಸಿದ್ದಪ್ಪ ಮುಂಡರಗಿ, ಗುಂಡಪ್ಪಗೌಡ ಗುರಿಕಾರ, ಚಂದ್ರಶೇಖರ್ ನೆಲೋಗಿ, ಸಿಐಟಿಯು ಮುಖಂಡರಾದ ಪೆಂಚಲಯ್ಯ, ನಿಂಗಪ್ಪ, ಹಾಜಿ, ದಾವೂದ್, ಸರಸ್ವತಿ ಈಚನಾಳ, ಸಿದ್ದಮ್ಮ, ಖಾಜಾ ಟೈಲ್ಸ್, ಫಕ್ರುದ್ದೀನ್, ವೆಂಕಟೇಶ ಗೋರಕಲ್, ಮಹಾಂತೇಶ, ಬಾಬು ಭೂಪೂರು, ಸಾಹೀರಾಬಾನು, ಶಾಂತಕುಮಾರಿ, ದುರುಗಮ್ಮ, ರಮೇಶ.ಜೆ, ಮೌನೇಶ ಕಡ್ಡೋಣಿ, ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-32-1103975733

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.