ಹಟ್ಟಿ ಚಿನ್ನದ ಗಣಿ: ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪಟ್ಟಣದ ಹಲವು ಬಡಾವಣೆಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ.

ರಾಮ್ ರಹೀಂ ಕಾಲೊನಿ, ಅಬ್ದುಲಾ ಕಾಲೊನಿ, ಕಾಕಾ ನಗರ, ವಾಲ್ಮೀಕಿ ನಗರ, ಅಂಬೇಡ್ಕರ್ ನಗರ, ಬಸವನಗರ, ಸಿದ್ದಾರೂಢ ನಗರ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಹಲವು ದಿನಗಳಿಂದ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಮ್ ರಹೀಂ ಕಾಲೊನಿಯಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ತಿಂಗಳಿಗೊಮ್ಮೆ ನಲ್ಲಿಗಳಿಗೆ ನೀರು ಬಿಡಲಾಗುತ್ತದೆ. ಈ ಸ್ಥಳದಲ್ಲಿ ನೀರಿನ ಸಂಗ್ರಹಗಾರ ಹಾಳಾಗಿದೆ. ಕೊಳವೆ ಬಾವಿಗಳೂ ಹಾಳಾಗಿದ್ದು, ನೀರಿಗಾಗಿ ಹಾಹಾಕರ ಸೃಷ್ಟಿಯಾಗಿದೆ.

ಕಾಲೊನಿ ಮಹಿಳೆಯರು ನೀರು ತರಲು ಕೊಡಗಳನ್ನು ಹಿಡಿದು ಕೊಳವೆಬಾವಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸಿ ಎಂದು ಪ.ಪಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಇದುವರೆಗೂ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ನಿವಾಸಿಗಳು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ.

ಪಟ್ಟಣದಲ್ಲಿ 13 ವಾರ್ಡ್ಗಳಿದ್ದು, 40 ಸಾವಿರ ಜನ ವಾಸಿಸುತ್ತಾರೆ. ಕೃಷ್ಣಾ ನದಿಯಿಂದ ಟ್ಯಾಂಕ್ಗೆ ನೀರು ತುಂಬಿಸಿ ತಿಂಗಳಿಗೊಮ್ಮೆ ಮನೆಗಳಿಗೆ ನೀರು ಬಿಡಲಾಗುತ್ತದೆ. ಉಳಿದ ಸಮಯದಲ್ಲಿ ನೀರಿಗಾಗಿ ನಿತ್ಯ ಅಲೆಯುವುದು ತಪ್ಪುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಜನರು.

ಟಣಮಕಲ್ಲು ಹತ್ತಿರ ನೀರಿನ ಮೋಟಾರ್ ಕೆಟ್ಟು 15 ದಿನಗಳು ಕಳೆದರೂ ದುರಸ್ತಿಗೆ ಮುಂದಾಗಿಲ್ಲ. ಕೊಳವೆ ಬಾವಿಗಳೂ ಕೆಟ್ಟಿವೆ. ಅವುಗಳ ದುರಸ್ತಿಯೂ ಮಾಡಿಲ್ಲ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಪಟ್ಟಣದಲ್ಲಿ ಸರಿಯಾದ ನೀರು ಪೂರೈಕೆ ವ್ಯವಸ್ಥೆ ಇಲ್ಲ. ನೀರಿಗಾಗಿ ಲಿಂಗವಧೂತ ದೇವಸ್ಥಾನ, ಹೊಸ ಬಸ್ ನಿಲ್ದಾಣ, ರಾಘವೇಂದ್ರ ದೇವಸ್ಥಾನ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯಕ್ಕೆ ಹೋಗಿ ಬರಬೇಕಾದ ಸ್ಥಿತಿ ಇದೆ.

ಮೇಲಧಿಕಾರಿಗಳು ಇತ್ತ ಕಡೆ ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸುತ್ತಾರೆ.

Quote - ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದು ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಹೋರಾಟ ನಡೆಸಲಾಗುವುದು ಶಿವಪ್ರಸಾದ ನಾಯಕ ಗ್ರಾ.ಪಂ ಮಾಜಿ ಸದಸ್ಯ

Quote - ಟಣಮಕಲ್ಲು ಬಳಿ ನೀರು ಸರಬರಾಜಿನ ಮೋಟಾರ್ ಕೆಟ್ಟಿದೆ. ಅದಕ್ಕಾಗಿ ನೀರಿನ ಸಮಸ್ಯೆ ಎದುರಾಗಿದೆ. ಹೊಸ ಮೋಟರ್ ತರಿಸಲಾಗಿದೆ. ಅಳವಡಿಸಿ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಜಗನ್ನಾಥ ಜೋಷಿ ಪ.ಪಂ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.