ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಜಿಲ್ಲೆಯಾದ್ಯಂತ ಹೋಳಿ ಬಣ್ಣದ ಸಂಭ್ರಮ

ಪರಸ್ಪರ ಬಣ್ಣ ಎರಚಿಕೊಂಡು ಶುಭಾಶಯ ಕೋರಿಕೆ
Last Updated 18 ಮಾರ್ಚ್ 2022, 13:45 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಪರಸ್ಪರ ಬಣ್ಣ ಎರಚಿಕೊಂಡು ಶುಭಾಶಯ ಕೋರುವ ಮೂಲಕ ಸಂಭ್ರಮ, ಸಡಗರದೊಂದಿಗೆ ಶುಕ್ರವಾರ ಆಚರಿಸಲಾಯಿತು.

ಕಳೆದ ಮೂರು ವರ್ಷಗಳಿಂದ ಸರಳವಾಗಿ ಹಬ್ಬ ಆಚರಿಸಿದ್ದ ಜನರು, ಈ ಬಾರಿ ಕೋವಿಡ್‌ ಆತಂಕವಿಲ್ಲದೆ ಮನೆಗಳ ಎದುರು ಹಾಗೂ ಬಡಾವಣೆಗಳುದ್ದಕ್ಕೂ ಬಣ್ಣದೋಕುಳಿ ಮಾಡುತ್ತಿರುವುದು ಕಂಡುಬಂತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲರೂ ಬಣ್ಣದಲ್ಲಿ ಮಿಂದೆದ್ದರು.

ಸಂಪ್ರದಾಯದಂತೆ ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಗಿನ ಜಾವ ಕಾಮನ ದಹನ ಮಾಡಲಾಯಿತು. ಆನಂತರ ಬಣ್ಣ ಎರಚುವುದು ಶುರುವಾಗಿತ್ತು. ಹಬ್ಬದ ಪ್ರಯುಕ್ತ ಬಹಳಷ್ಟು ವ್ಯಾಪಾರಿಗಳು ಮಳಿಗೆ ತೆರೆದುಕೊಂಡಿರಲಿಲ್ಲ. ಮಧ್ಯಾಹ್ನದ ಬಳಿಕವೇ ವ್ಯಾಪಾರವು ಸಹಜವಾಗಿ ಆರಂಭವಾಯಿತು.

ಯುವಜನರು ಬೈಕ್‌ ಮೇಲೆ ಸಂಚರಿಸಿ ಸ್ನೇಹಿತರ ಮನೆಗಳಿಗೆ ಹೋಗಿ ಬಣ್ಣ ಹಾಕುವುದು, ಹೋಳಿ ಶುಭಾಶಯ ಕೋರುವುದು ಸಾಮಾನ್ಯವಾಗಿತ್ತು. ಕೆಲವು ಬಡಾವಣೆಗಳಲ್ಲಿ ಚಿತ್ರಗೀತೆಗಳನ್ನು ಹಾಕಿ ನೃತ್ಯ ಮಾಡಿಕೊಂಡು ಸಂಭ್ರಮದಿಂದ ಬಣ್ಣದಾಟ ಆಡುತ್ತಿದ್ದರು. ಮಕ್ಕಳ ಸಂಭ್ರಮ ವಿಶೇಷವಾಗಿತ್ತು. ಪಿಚಕಾರಿಯಿಂದ ಬಣ್ಣ ಸಿಡಿಸಿ ಸ್ನೇಹಿತರೊಂದಿಗೆ ಆಟವಾಡಿದರು.

ಸಿಂಧನೂರು, ದೇವದುರ್ಗ ತಾಲ್ಲೂಕುಗಳ ಕೆಲವು ಭಾಗಗಳಲ್ಲಿ ಯುಗಾದಿ ರಂಗಪಂಚಮಿಯಂದು ಬಣ್ಣದಾಟವಾಡುವ ಸಂಪ್ರದಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT