ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಸ್ತಿನ ಕಲಿಕೆಯಿಂದ ಅಸಮಾನ್ಯ ಸಾಧನೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Last Updated 14 ಜನವರಿ 2022, 13:14 IST
ಅಕ್ಷರ ಗಾತ್ರ

ರಾಯಚೂರು: ಶಿಸ್ತು ಮತ್ತು ಆಸಕ್ತಿಯಿಂದ ಕಲಿತುಕೊಂಡಾಗ ಮಾತ್ರ ಒಬ್ಬ ಸಮಾನ್ಯ ವ್ಯಕ್ತಿಯಿಂದ ಅಸಮಾನ್ಯ ವ್ಯಕ್ತಿಯಾಗಿ ಸಾಧಕರಾಗಿ ರೂಪಗೊಳ್ಳಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್‌ ಬಿ. ಹೇಳಿದರು.

ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಹಮ್ಮಿಕೊಂಡಿದ್ದ ಎಂಟು ದಿನಗಳ ಗೃಹರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರದಲ್ಲಿ ಗುರುವಾರ ನಡೆದ ಅಂತಿಮ ದಿನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಾರ್ಷಿಕ ಮೂಲ ತರಬೇತಿ ಶಿಬಿರದಲ್ಲಿ ಎಂಟು ದಿನಗಳ ಕಾಲ ವಿವಿಧ ರೀತಿಯ ತರಬೇತಿಗಳಾದ ಡ್ರೀಲ್, ಬಂದೂಕು ಫೈರ್‌ಗಳನ್ನು ಗೃಹರಕ್ಷಕದವರು ಕಲಿತಿದ್ದಾರೆ. ಈ ಶಿಬಿರದಲ್ಲಿ ಕಲಿತಿರುವುದನ್ನು ಜೀರ್ಣಸಿಕೊಂಡು ಜೀವನದಲ್ಲಿ ಆಳವಡಿಸಿಕೊಂಡು ಮುಂದೆ ಹೆಜ್ಜೆಯನ್ನೀಡಬೇಕು. ವ್ಯವಹಾರಿಕ ಜೀವನದಲ್ಲಿ, ವೈಯಕ್ತಿಕ ಜೀವನದಲ್ಲಿ ಸಹ ಶಿಸ್ತನ್ನು ಆಳವಡಿಸಿಕೊಳ್ಳವುದು ಅನಿವಾರ್ಯ ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ರಾಜಾ ಶ್ರೀನಿವಾಸ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಪೊಲೀಸರಾಗಿ ಆಯ್ಕೆಯಾದ ನಂತರ ಶಿಸ್ತಿನ ತರಬೇತಿಗಳನ್ನು ಪಡೆಯುತ್ತಾರೆ. ಅದರೆ ಅದೇ ರೀತಿಯಾಗಿ ಗೃಹರಕ್ಷಕರು ಶಿಸ್ತಿನ ತರಬೇತಿಗಳನ್ನು ಪಡೆಯುವುದು ಸೌಭಾಗ್ಯ ಎಂದು ಹೇಳಿದರು.

ಸಮಾಜದಲ್ಲಿ ಉತ್ತಮವಾದ ಹುದ್ದೆಗಳನ್ನು ಪಡೆಯಲು ಎಲ್ಲಾ ರೀತಿಯ ಆರ್ಹತೆಗಳಿದ್ದರು ಸಹ ಉನ್ನತ ಹುದ್ದೆಗಳು ಪಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಶಿಸ್ತಿನ ಕೊರತೆ ಜೊತೆಗೆ ದೃಢ ಮನಸ್ಸಿನ ಕೊರತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮಾದೇಷ್ಟ ಜಂಬಣ್ಣ ರಾಮಸ್ವಾಮಿ ಮಾತನಾಡಿ, ತರಬೇತಿ ಪಡೆದ ಗೃಹರಕ್ಷಕರಿಗೆ ಇಲಾಖಾ ನಿಯಮಗಳನ್ನು ತಿಳಿಸುವುದರ ಜೊತೆಗೆ ಪಾಲಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.

ಕಮಾಂಡೆಂಟ್ ಸಿ.ಐ.ಎಸ್.ಎಫ್ ಘಟಕ ಆರ್.ಟಿ.ಪಿ.ಎಸ್ ಶಕ್ತಿನಗರದ ಎಸ್.ಕೆ.ಪಾಸ್ವಾನ್, ಪಿ.ಯಲ್ಲಪ್ಪ, ಅವ್ವ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಟಿ.ಸೂಗಪ್ಪ, ಕ್ಯಾಂಪ್ ಕಮಾಂಡೆಂಟ್ ರಾಣೋಜಿ, ಸೀನಿಯರ್ ಪ್ಲಟೂನ್ ಕಮಾಂಡರ್‌ಗಳಾದ ಸೈಯದ್ ಜಾವೇದ್‌ಪಾಷ, ನಿಂಬನಗೌಡ, ಎನ್.ಬಸವರಾಜ, ತಿಮ್ಮನಗೌಡ, ಪ್ಲಟೂನ್ ಕಮಾಂಡರ್, ವರದರಾಜ.ಕೆ ಚನ್ನಪ್ಪ, ರಮೇಶ ಕಟ್ಟಿಮನಿ, ಸುಭಾಷಚಂದ್ರ, ಎಚ್.ಮಲ್ಲಿಕಾರ್ಜುನ, ವೀರಭದ್ರಪ್ಪ, ಭವಾಂಜಿರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT