ಶನಿವಾರ, ಜೂನ್ 6, 2020
27 °C
ದೆಹಲಿಯ ನಿಜಾಮುದ್ದೀನ್‌ಗೆ ತೆರಳಿದ್ದವರ ಪತ್ತೆ

13 ಜನರಿಗೆ ಗೃಹ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರ್ವಿಹಾಳ: ಈಚೆಗೆ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲೀಗ್ ಜಮಾತ್ ಕೇಂದ್ರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ, ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಒಟ್ಟು ಹದಿಮೂರು ಜನರನ್ನು ಪತ್ತೆ ಮಾಡಲಾಗಿದೆ.

ಸಿಂಧನೂರಿನ ಧಾರ್ಮಿಕ ಮುಖಂಡರೊಂದಿಗೆ ಹೋಗಿ ಬಂದಿರುವದಾಗಿ ಒಪ್ಪಿಕೊಂಡಿದ್ದಾರೆ. ಎಲ್ಲೋ ಇದ್ದ ಕೊರೊನಾ ನಮ್ಮೂರಿಗೆ ಬಂದಿದೆ ಎಂದು ಜನರು ಆತಂಕಗೊಂಡಿದ್ದಾರೆ.

ಖಚಿತ ಮಾಹಿತ ಮೇರೆಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿಗಳು, ಅವರ ಮನೆ-ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿದರು. ಇವರು ದೆಹಲಿಯಿಂದ ಫೆಬ್ರುವರಿ 13 ರಂದು ಗ್ರಾಮಕ್ಕೆ ಮರಳಿದ್ದಾಗಿ ತಿಳಿಸಿದರು. ಅವರ ಎಲ್ಲ ಮಾಹಿತಿ ತಾಲ್ಲೂಕು ಆಡಳಿತಕ್ಕೆ ಕಳಿಸಲಾಗಿದೆ. ಅವರ ಆದೇಶದ ನಂತರ ರಾಯಚೂರಿಗೆ ಕಳಿಸಲಾಗುವುದು. ಅಲ್ಲಿಯವರೆಗೆ ಅವರನ್ನು ಅವರ ಕುಟುಂಬದ ಸದಸ್ಯರನ್ನು ಸೇರಿದಂತೆ ಶುಕ್ರವಾರದಿಂದ ಹೋಂ ಕ್ವಾರಂಟೈನ್ ಮಾಡಲಾಗುವುದು ಎಂದರು

ಈ ಸಂರ್ಭದಲ್ಲಿ ಮುಖಂಡ ಆರ್ ಸಿದ್ದನಗೌಡ, ಪ.ಪಂ ಮುಖ್ಯಾಧಿಕಾರಿ ಹಾಜಿಬಾಬು, ಪಿಎಸ್ಐ ಎರಿಯಪ್ಪ ಅಂಗಡಿ, ಉಪಾಧ್ಯಕ್ಷ ಭೀಮದಾಸ, ದೊಡ್ಡಪ್ಪ ಕಲ್ಗುಡಿ, ಆರೋಗ್ಯ ಅಧಿಕಾರಿ ಮಂಜುನಾಥ, ಮುತ್ತಣ್ಣ ನವಲಿ, ಕರಿಯಪ್ಪ ಟೇಲರ್, ಸಿಬ್ಬಂದಿ ಸಿದ್ದಪ್ಪ ಹಾಗೂ ರಾಜೇಶ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.