ಸಿಂಧನೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ದಢೇಸುಗೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆಯುಷ್ಮಾನ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಗೊರೇಬಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹ್ಯೂಮನ್ ಪ್ಯಾಪಿಲೋಮ ವೈರಸ್ ಲಸಿಕೆಯ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಅವರು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

ಈ ವೇಳೆ ಮಾತನಾಡಿದ ಅವರು, ಎಚ್ಪಿವಿ ಲಸಿಕೆ ಎಂದರೆ ಹ್ಯೂಮನ್ ಪ್ಯಾಪಿಲೋಮ ವೈರಸ್ನಿಂದ ಉಂಟಾಗುವ ಜನನಾಂಗದ ನರಹುಲಿಗಳು. ಗುದದ್ವಾರ ಗಂಟಲು ಮತ್ತು ತಲೆ ಕುತ್ತಿಗೆ ಕ್ಯಾನ್ಸರ್ಗಳಿಂದ ರಕ್ಷಣೆ ನೀಡುತ್ತದೆ. 9 ರಿಂದ 45 ವರ್ಷ ವಯಸ್ಸಿನ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಈ ಲಸಿಕೆ ಅತ್ಯಂತ ಪರಿಣಾಮಕಾರಿ. ಹೆಣ್ಣು ಮಕ್ಕಳಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಿಕೆ, ಕ್ಯಾನ್ಸರ್ ಪೂರ್ವ ಸ್ಥಿತಿಗಳ ನಿರ್ವಹಣೆ ಕ್ಯಾನ್ಸರ್ಗೆ ಕಾರಣವಾಗುವ ಎಚ್ಪಿವಿ ತಳಿಗಳಿಂದ ಉಂಟಾಗುವ ಕೋಶಗಳ ಬದಲಾವಣೆಯನ್ನು ತಡೆಯುತ್ತದೆ. ಜನನಾಂಗದ ನರಹುಲಿಗಳ ಕ್ಯಾನ್ಸರ್ಗಳ ತಡೆಗಟ್ಟುವಿಕೆಗೆ ಈ ಲಸಿಕೆಯನ್ನು 9 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಎರಡು ಡೋಸ್ಗಳನ್ನು ಶಿಫಾರಸು ಮಾಡಲಾಗುತ್ತದೆ ಎಂದು ವಿವರಿಸಿದರು.

ಲೈಂಗಿಕ ಚಟುವಟಿಕೆಗಳ ಪ್ರಾರಂಭವಾಗುವ ಮೊದಲು ಲಸಿಕೆ ಪಡೆಯುವುದು ಅತ್ಯಂತ ಪರಿಣಾಮಕಾರಿ. 15 ರಿಂದ 45 ವರ್ಷ ವಯಸ್ಸಿನವರೆಗೂ ಇದು ಪ್ರಯೋಜನಕಾರಿಯಾಗಿದೆ. ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿದೆ. ಲಸಿಕೆ ಹಾಕಿದ ಜಾಗದಲ್ಲಿ ನೋವು, ಊತ ಅಥವಾ ಲಘು ಜ್ವರ ಇರಬಹುದು. ಲಸಿಕೆ ಪಡೆಯುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ಎಚ್ಪಿವಿ ಲಸಿಕೆಯು ಹೊಸದೇನಲ್ಲ ಜಗತ್ತಿನಾದ್ಯಂತ ಈಗಾಗಲೇ 50 ಕೋಟಿ ಲಸಿಕೆಗಳನ್ನು ನೀಡಲಾಗಿದೆ. ಕಳೆದ 15 ವರ್ಷಗಳ ಅಂಕಿ ಅಂಶಗಳು ಎಚ್ಪಿವಿ ಲಸಿಕೆ ಸುರಕ್ಷತಾ ಮತ್ತು ಪರಿಣಾಮಕಾರಿ ಎಂದು ಸಾಬೀತು ಪಡಿಸಿವೆ ಎಂದರು.

ಪಿಎಚ್ಸಿಇಒ ಅಂಬಮ್ಮ, ಸಿಎಚ್ಒ ಚಾಂದ್ಬಾಷಾ, ಮುಖ್ಯಶಿಕ್ಷಕ ಶಿವರೆಡ್ಡಿ, ಶಿಕ್ಷಕಿಯರಾದ ನಿಲೋಪರ್, ಶ್ವೇತಾ, ಪದ್ಮಾ, ಶಿಕ್ಷಕ ಗಂಗಾಧರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.