ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಕೊಡೇಕಲ್ಲ, ನಾರಾಯಣಪುರ, ಮಾಳನೂರು, ಇಸಾಂಪುರ, ಮುದನೂರು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಗುರುವಾರ ಮುಸ್ಲಿಂರು ಬಕ್ರೀದ್ ಹಬ್ಬ ಆಚರಿಸಿ ಸಂಭ್ರಮಿಸಿದರು.

ಹುಣಸಗಿ ಪಟ್ಟಣದಲ್ಲಿ ಬೆಳಿಗ್ಗೆ ಮುಸ್ಲಿಂರು ತಮ್ಮ ಬಂಧು ಮಿತ್ರರೊಂದಿಗೆ ನಮಾಜ್ ಸಲ್ಲಿಸಲು ಈದ್ಗಾದತ್ತ ಧಾವಿಸುತ್ತಿರುವ ದೃಶ್ಯ ಕಂಡು ಬಂತು. ಮೌಲಾನಾ ಮಹಮ್ಮದ ಅಲಿ ಬೆಣ್ಣುರ ಮಾತನಾಡಿ, ‘ಈ ಹಬ್ಬವು ಪ್ರವಾದಿ ಇಬ್ರಾಹಿಂ ಅವರ ಬದುಕಿನ ಮಹತ್ವಪೂರ್ಣ ಘಟನೆ ಸ್ಮರಿಸುವ ಹಬ್ಬವಾಗಿದೆ. ತ್ಯಾಗದ ಪ್ರತೀಕವಾಗಿ ಈ ಹಬ್ಬದಂದು ಉಳ್ಳವರು ತಮ್ಮ ಶಕ್ತಿ ಮೀರಿ ದಾನ ಧರ್ಮ ಕಾರ್ಯ ಮಾಡುವುದು ಹೆಚ್ಚು ಒಳಿತು’ ಎಂದು ಬಕ್ರೀದ್ ಕುರಿತು ವಿವರಿಸಿದರು.

ಮುಖಂಡರಾದ ಸುಬಾನ್ ಅಲಿ ಡೆಕ್ಕನ್, ಮಹಮ್ಮದ ಹನೀಫ್ ಸಾಬ ಬೆಣ್ಣೂರ, ಮಹಮ್ಮದ ಅಲಿ ಹವಾಲ್ದಾರ್, ಅಬ್ದುಲ್ ಹಮೀದ್ಸಾಬ ಡೆಕ್ಕನ್, ಖಾಜಾ ಪಟೇಲ, ಹಾಜಿ ನೂರ ಅಹಮ್ಮದ, ಡಾ. ಅಹಮ್ಮದ ಪಟೇಲ ನಾಲತ್ವಾಡ, ಇಸ್ಮಾಯಿಲ್ ಬೆಣ್ಣಿ, ಖಾಜಾಪಟೇಲ, ರಂಜಾನ್ ಖುರೇಶಿ, ನಬಿಲಾಲ್, ಕಾಶಿಂಸಾಬ ಟೊಣ್ಣೂರ ಖಾಸಿಂಸಾಬ ಚೌದ್ರಿ, ರಫೀಕ್, ರಸೂಲ ಬೆಣ್ಣೂರ ಸೇರಿದಂತೆ ಇತರರು ಇದ್ದರು. ಇಸಾಂಪೂರ ಗ್ರಾಮದ ಜಾಮೀಯಾ ಮಸ್ಜಿದ್ ನಲ್ಲಿ ಮುಸ್ಲಿಂ ಭಾಂದವರು ಸೇರಿ ಸಾಮೂಹಿಕವಾಗಿ ಬಕ್ರೀದ್ ಹಬ್ಬ ಆಚರಣೆ ಮಾಡಿದರು. ಖಾಜಾ ಪಟೇಲ ಪೊಲೀಸ್ ಪಾಟೀಲ, ಪೀರಸಾ ಪಟೇಲ, ಮಶಾಕಸಾಬ ಮುಜಾವರ, ಕಾಸೀಂಸಾಬ ಮುಜಾವರ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-30-425134543

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.