ಲಿಂಗಸುಗೂರು: ತಾಲ್ಲೂಕಿನ ಹುನುಕುಂಟಿ ಗ್ರಾಮದಲ್ಲಿ ಬುಧವಾರ ಬಸವೇಶ್ವರ ದೇವಾಲಯ ಲೋಕಾರ್ಪಣೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಅಮರೇಶ್ವರ ದೇವಸ್ಥಾನದ ಅರ್ಚಕ ಗಂಗಾಧರಯ್ಯ ಶಾಸ್ತ್ರೀ ನೇತೃತ್ವದಲ್ಲಿ ಬಸವೇಶ್ವರ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ನಂತರ ನವಗ್ರಹ, ಏಕದಶಾರುದ್ರ, ಪಂಚಕಳಸ, ಪ್ರತಿಷ್ಠಾನ ಹೋಮ ಹವನ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆದವು. ದೇವಾಲಯ ಲೋಕಾರ್ಪಣೆ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ 5 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಮಾರಂಭದಲ್ಲಿ ಅಂಕಲಿಮಠದ ಪಕೀರೇಶ್ವರ ಸ್ವಾಮೀಜಿ, ಶರಣಯ್ಯ ತಾತಾ ಹುನಕುಂಟಿ, ಮಾದಯ್ಯ ಗುರುವಿನ, ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಅಭಿಷೇಕ್ ಪಾಟೀಲ ಬಯ್ಯಾಪುರ, ಕುರುಬ ಸಂಘದ ಜಿಲ್ಲಾ ಅಧ್ಯಕ್ಷ ಗುಂಡಪ್ಪ ಸಾಹುಕಾರ ಕಾಚಪೂರ, ಬಸವರಾಜ ಜೆಲ್ಲಿ, ಸಂಜೀವಪ್ಪ ಚಲುವಾದಿ, ಉಮೇಶ ಹುನಕುಂಟಿ, ಪರಸಪ್ಪ ಹುನಕುಂಟಿ, ದೇವಪ್ಪ ಕುರಿ, ಶರಣಗೌಡ ಪಾಟೀಲ, ಶರಣಪ್ಪ, ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಜಯರಾವ್ ದೇಶಪಾಂಡೆ, ಉಪಾಧ್ಯಕ್ಷ ಕಲ್ಲಪ್ಪ ದೇವರಮನಿ, ಕಾರ್ಯದರ್ಶಿ ಗುಂಡನಗೌಡ ಪೋಲಿಸ್ ಪಾಟೀಲ, ಶರಣಪ್ಪ ಜಟ್ನಿರ್, ಅರ್ಚಕ ಮಂಜುನಾಥ ಹೂಗಾರ ಜಗದೀಶ ದೋಟಿಹಾಳ ಹಾಗೂ ಇನ್ನಿತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-32-535656605

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.